QR Code Business Card

ಗುರುಪೂರ್ಣಿಮೆ ಆಚರಣೆ

ದಿನಾಂಕ 12-7-2014 ರ ಶನಿವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ನಡೆಯಿತು. ಶ್ರೀ ವೇದವ್ಯಾಸ, ನಿವೃತ್ತ ಉಪನ್ಯಾಸಕರು, ವಿವೇಕಾನಂದ ಕಾಲೇಜು, ಪುತ್ತೂರು, ಮಾತನಾಡುತ್ತಾ ಹಾತೆಯು ಬೆಳಕನ್ನು ಕಂಡಾಗ ಆಕರ್ಷಿತವಾಗುವಂತೆ ಗುರುವನ್ನು ಕಂಡಾಗ ಶಿಷ್ಯನು ಆಕರ್ಷಿತನಾಗುತ್ತಾನೆ. ನಮ್ಮಲ್ಲಿ ಇರುವ ಶಕ್ತಿ ಪ್ರಕಟವಾಗಬೇಕಾದರೆ ಗುರುವಿನ ಅವಶ್ಯಕತೆ ಇದೆ. ಗುರು ಎಲ್ಲರ ಅಂತರಾತ್ಮದಲ್ಲಿರುತ್ತಾನೆ. ಗುರುವಿನಿಂದ ನಾವು ವಿಶ್ವದ ಮಹಾನ್ ಶಕ್ತಿಯಾಗಬಹುದು ಎಂದರು. ಶ್ರೀಮತಿ ಶೋಭಾ ಕೊಳತ್ತಾಯ, ಆಡಳಿತ ಮಂಡಳಿ ಸದಸ್ಯರು, ಪ್ರಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ, ಹಿರಿಯ ಶಿಕ್ಷಕಿ ಮೋಹಿನಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

DSCN0797

DSCN0812