QR Code Business Card

ತ್ರೋಬಾಲ್ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು ಮತ್ತು ಮೌಂಟನ್‌ವ್ಯೂ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇದರ ಆಶ್ರಯದಲ್ಲಿ ದಿನಾಂಕ 13-09-2014 ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಪ್ರೌಢ ಶಾಲಾ ಬಾಲಕ-ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ಬೆಳ್ತಂಗಡಿಯಲ್ಲಿ 19-09-2014 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲಿದೆ. ತಂಡದಲ್ಲಿ ದಿಶಾನ್, ತನುಷ್.ಕೆ.ಎಚ್, ಮೌನೀಷ್.ಎಂ, ಸಂಜನ್.ಜಿ.ಎಸ್, ನಾರಾಯಣ ಕೆದಿಲಾಯ, ಶ್ರೇಯಸ್, ವೈಶಾಖ್‌ಕೃಷ್ಣ, ನಚಿಕೇತ.ಎಂ, ಚಿಂತನ್.ಎಂ, ನೆಲ್ಸನ್ ಮಾರ್ತಾಂಗ್, ಡಿಫೆಂಡರ್ ಕ್ಸೂ, ಯೋಹಿಮಿ ಶಿಲ್ಲಾ ಭಾಗವಹಿಸಿದ್ದರು. ಈ ಪಂದ್ಯಾಟದಲ್ಲಿ ದಿಶಾನ್ ಉತ್ತಮ ಸರ್ವಾಂಗೀಣ ಆಟಗಾರ ಪ್ರಶಸ್ತಿಯನ್ನು ಪಡೆದಿರುತ್ತಾನೆ.

IMG