QR Code Business Card

ವಿವಿಧ ಕ್ರೀಡಾಕೂಟಗಳಿಗೆ ವಿವೇಕಾನಂದ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಆಯ್ಕೆ

1. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇಲ್ಲಿನ ವಿದ್ಯಾರ್ಥಿಗಳಾದ ಅಭಿಷೇಕ್ 8ನೇ ತರಗತಿ, ನಿತಿನ್ ಕುಮಾರ್ ೮ನೇ ತರಗತಿ 2014-15 ನೇ ಸಾಲಿನ 14 ವರ್ಷದೊಳಗಿನ ಬಾಲಕರ ಮೈಸೂರು ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಆಯ್ಕೆಯಾಗಿದ್ದು 9-9-14 ರಂದು ಅರಸು ಒಳಕ್ರೀಡಾಂಗಣ, ಗುಂಡ್ಲುಪೇಟೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

2. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇದರ ವಿದ್ಯಾರ್ಥಿ ರತನ್ ಕುಮಾರ್ ೮ನೇ ತರಗತಿ, ವಿದ್ಯಾರ್ಥಿನಿಯರಾದ ಶಿಲ್ಪಾ ಪಿ.ಯು. 9 ನೇ ತರಗತಿ, ಶ್ರೀ ಲಕ್ಷ್ಮೀ ಶೆಟ್ಟಿ 9ನೇ ತರಗತಿ ಇವರು ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.