QR Code Business Card

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಿಷನ್ 95 +

ದಿನಾಂಕ. 05-07-2014೪ರ ಶನಿವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಮತ್ತು ಜೆ.ಸಿ.ಐ, ಪುತ್ತೂರು ಇದರ ಸಹಯೋಗದಲ್ಲಿ ತಾಲೂಕಿನ ಎಲ್ಲಾ ಶಾಲಾ ಗಣಿತ ಶಿಕ್ಷಕರಿಗೆ ಮಿಷನ್ 95+ ಕಾರ್ಯಾಗಾರ ನಡೆಯಿತು. ಶ್ರೀ ಕೃಷ್ಣನಾರಾಯಣ ಮುಳಿಯ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ ಅಧ್ಯಾಪಕ ನಿಜವಾದ ಯಶಸ್ಸು ವಿದ್ಯಾರ್ಥಿಯು ಯಶಸ್ಸು ಕಂಡಾಗ ಮಾತ್ರ ಸಾಧ್ಯವಾಗುತ್ತದೆ. ನಮ್ಮ ಕರ್ತವ್ಯಗಳನ್ನು ಮನಪೂರ್ವಕವಾಗಿ ಮಾಡಲು ಜೆ.ಸಿ.ಐ ಪೂರಕ ತರಬೇತಿ ನೀಡುತ್ತದೆ ಮತ್ತು ಮಿಷನ್ 95+ ಎಂಬ ಕನಸು ಶಿಕ್ಷಕರ ಶ್ರಮದಿಂದ ನನಸಾಗಬೇಕು ಎಂದರು.

DSCN0711

ಶ್ರೀ ಶಶಿಧರ.ಎನ್, ಶಿಕ್ಷಣಾಧಿಕಾರಿಗಳು, ಪುತ್ತೂರು ಮಾತನಾಡುತ್ತಾ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಲ್ಲರಿಗೂ ಗಣಿತ ಪಠ್ಯವಸ್ತು ಸುಲಭವಾಗಬೇಕು ಮತ್ತು ಆ ನಿಟ್ಟಿನಲ್ಲಿ ಕನಸು ಕಾಣಬೇಕು. ಕನಸು ಕಂಡಾಗ ವಿಚಾರ ಮೂಡುತ್ತದೆ, ವಿಚಾರ ಮೂಡಿದಾಗ ವಿಷಯ ಕೃತಿ ರೂಪಕ್ಕೆ ಬರುತ್ತದೆ ಹಾಗಾಗಿ ಮಿಷನ್ 95+ ಒಂದು ಕನಸುಗಳ ಪ್ರತಿರೂಪ ಎಂದರು.

DSCN0696

ವೇದಿಕೆಯಲ್ಲಿ ಪ್ರೋ.ಎ.ವಿ.ನಾರಾಯಣ, ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು(ರಿ.) ಇದರ ಕಾರ್ಯನಿರ್ವಹಣಾ ನಿರ್ದೇಶಕರು, ಶ್ರೀ ಜಗನ್ನಾಥ ಅರಿಯಡ್ಕ, ಚಿತ್ರಕಲಾ ಶಿಕ್ಷಕರು, ಸರಕಾರಿ ಪದವಿ ಪೂರ್ವ ಕಾಲೇಜು, ಪುತ್ತೂರು, ಶ್ರೀ ಅಬ್ರಹಾಂ, ಅಧ್ಯಕ್ಷರು, ತಾಲೂಕು ಮುಖ್ಯೋಪಾಧ್ಯಾಯರ ಸಂಘ, ಶ್ರೀ ವೆಂಕಟರಮಣ, ಅಧ್ಯಕ್ಷರು ತಾಲೂಕು ಶಿಕ್ಷಕ ಸಂಘ, ಶ್ರೀ ರವೀಂದ್ರ ಟಿ. ಶಿಕ್ಷಕರು, ಸೈಂಟ್ ಜಾರ್ಜ್ ಪ್ರೌಢಶಾಲೆ, ನೆಲ್ಯಾಡಿ ಇವರು ಉಪಸ್ಥಿತರಿದ್ದರು.

DSCN0708

ಶಾಲೆಯ ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕ ಶ್ರೀ ರಾಜೇಶ್ ನುಳಿಯಾಲು ವಂದಿಸಿ, ಶಿಕ್ಷಕಿಯರಾದ ಶ್ರೀಮತಿ ಸಾಯಿಗೀತ.ಎಸ್, ಶ್ರೀಮತಿ ಸಂಧ್ಯಾ ಧನ್ಯವಾದ ಕಾರ್ಯಕ್ರಮ ನಿರೂಪಿಸಿದರು.