QR Code Business Card

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಚುನಾವಣೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2015-16 ನೇ ಶೈಕ್ಷಣಿಕ ಸಾಲಿನ ಶಾಲಾ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕ ಸ್ಥಾನಕ್ಕೆ ಚುನಾವಣೆಯು ಶಾಲಾ ಆವರಣದಲ್ಲಿ ದಿನಾಂಕ 24-06-2015 ನೇ ಬುಧವಾರದಂದು ನಡೆಯಿತು. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆಯ ಪ್ರಕ್ರಿಯೆ ನಡೆಸಿ ಸರಕಾರವನ್ನು ರಚಿಸಿಲಾಯಿತು.

ಪ್ರಾಥಮಿಕ ಮತ್ತು ಪ್ರೌಢ ಎರಡೂ ವಿಭಾಗಕ್ಕೆ ನಡೆದ ಚುನಾವಣೆಯಲ್ಲಿ ಶಾಲಾ ಮುಖ್ಯ ಗುರು ಸತೀಶ್ ಕುಮಾರ್ ರೈ ಮುಖ್ಯ ಚುನಾವಣಾಧಿಕಾರಿಗಳಾಗಿದ್ದರು. ಪ್ರೌಢ ಶಾಲಾ ವಿದ್ಯಾರ್ಥಿ ನಾಯಕನಾಗಿ ನಿನಾದ್ ರೈ (10ನೇ ತರಗತಿ) ಉಪನಾಯಕನಾಗಿ ಸಾತ್ವಿಕ್ ಬಿ.ಎಸ್. (9ನೇ ತರಗತಿ) ಹಾಗೂ ಪ್ರಾಥಮಿಕ ವಿಭಾಗದಲ್ಲಿ ವಿದ್ಯಾರ್ಥಿ ನಾಯಕನಾಗಿ ಸುಶಾಂತ್ ಎನ್. ಜಿ. (7ನೇ ತರಗತಿ) ಮತ್ತು ಉಪನಾಯಕಿಯಾಗಿ ಅನ್ವಿತಾ ಬಿ.ಎ. (6ನೇ ತರಗತಿ) ಇವರು ಆಯ್ಕೆಯಾಗಿರುತ್ತಾರೆ. ಪ್ರಾಥಮಿಕ ವಿಭಾಗದ ಮುಖ್ಯಗುರು ರಾಮ ನಾಕ್, ಶಾಲಾ ಶಿಕ್ಷಕ ವೃಂದ ಚುನಾವಣಾ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸಿ ಚುನಾವಣೆಯನ್ನು ಯಶ್ವಸಿಯಾಗಿ ನಿರ್ವಹಿಸಿದರು.

Highschool

primary