QR Code Business Card

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಸಭೆ ಮತ್ತು ಹೊಸ ಸಮಿತಿ ರಚನೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇದರ ೨೦೧೪-೧೫ನೇ ಸಾಲಿನ ಪೋಷಕ ಪ್ರತಿನಿಧಿಗಳ ಸಭೆಯು ದಿನಾಂಕ ೧೫-೦೮-೨೦೧೫ ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ರವೀಂದ್ರ ಪಿ, ಶಾಲಾ ಸಂಚಾಲಕರು ಮಾತನಾಡಿ, ಮನೆ ಮಗು ಕೇಂದ್ರಿತವಾಗಿರಬೇಕು. ಅಂದರೆ ವಿದ್ಯಾರ್ಥಿ ಕೇಂದ್ರಿತವಾಗಿರಬೇಕು ಎಂದು ಎಲ್ಲಾ ಪೋಷಕ ಪ್ರತಿನಿಧಿಗಳ ಸಹಕಾರ ಕೋರಿದರು.

DSCF4643

ರವಿ ಮುಂಗ್ಲಿಮನೆ, ನಿಕಟಪೂರ್ವ ಅಧ್ಯಕ್ಷರು ರಕ್ಷಕ-ಶಿಕ್ಷಕ ಸಂಘ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಹಿಂಜರಿಕೆ ಎಂಬುವುದು ಮಾನವನ ಸೋಲು ಇದ್ದಂತೆ. ಹಿಂಜರಿಕೆ ಬಿಟ್ಟು ಸಿಕ್ಕಿದ ಅವಕಾಸವನ್ನು ಪಡೆದು ಮುಂದೆ ಬಂದು ಸೂಕ್ತ ಸಲಹೆಗಳನ್ನು ಕೊಡುವುದರಿಂದ ಶಾಲಾಭಿವೃದ್ಧಿಗೆ ಪೂರಕವಾಗುತ್ತದೆ ಎಂದರು.

DSCF4645

ಸತೀಶ್ ಕುಮಾರ್ ರೈ, ಮುಖ್ಯೋಪಾಧ್ಯಾಯರು ಪ್ರೌಢಶಾಲಾ ವಿಭಾಗ ಹೊಸ ಸಮಿತಿ ರಚನೆ ಮತ್ತು ಉದ್ದೇಶಗಳನ್ನು ವಿವರಿಸಿದರು. ವೇದಿಕೆಯಲ್ಲಿ ಡಾ.ಕೆ.ಎಂ.ಕೃಷ್ಣ ಭಟ್, ಶಾಲಾ ಅಡಳಿತ ಮಂಡಳಿ ಅಧ್ಯಕ್ಷರು, ಶ್ರೀಮತಿ ಮಮತಾ.ಬಿ, ಮುಖ್ಯಸ್ಥೆ, ಪೂರ್ವ ಪ್ರಾಥಮಿಕ ವಿಭಾಗ ಉಪಸ್ಥಿತರಿದ್ದರು. ನಿಕಟಪೂರ್ವಾಧ್ಯಕ್ಷರಾದ ರವಿ ಮುಂಗ್ಲಿಮನೆ ಯವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು ಮತ್ತು ೨೦೧೫ರ ಪೋಷಕರ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.

DSCF4634

ಉಪಾಧ್ಯಕ್ಷರುಗಳಾಗಿ ರಾಮಚಂದ್ರ ಶೆಟ್ಟಿ, ಅನಿಲ್ ತೆಂಕಿಲ, ಮನೋರಮ, ತ್ರಿವೇಣಿ ಕರುಣಾಕರ ಪೆರ್ವೋಡಿ, ಮತ್ತು ಅಧ್ಯಕ್ಷರನ್ನಾಗಿ ವಿ.ಜಿ.ಭಟ್ ಇವರನ್ನು ಆಯ್ಕೆ ಮಾಡಲಾಯಿತು. ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ರಾಮ ನಾಕ್ ಅತಿಥಿಗಳನ್ನು ಸ್ವಾಗತಿಸಿ, ರಾಧಾಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿದರು.