QR Code Business Card

ಗಣಹೋಮ ಮತ್ತು ಸರಸ್ವತಿ ಪೂಜೆ

ದಿನಾಂಕ 11-07-2016 ನೇ ಸೋಮವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇಲ್ಲಿ ಪುರೋಹಿತ್ ಕಶೆಕೋಡಿ ಸೂರ್ಯನಾರಾಯಣ ಭಟ್ ಇವರ ನೇತೃತ್ವದಲ್ಲಿ ಗಣಹೋಮ ಮತ್ತು ಸರಸ್ವತಿ ಪೂಜೆ ಶಾಲಾ ಸಭಾಂಗಣದಲ್ಲಿ ನಡೆಯಿತು.

20160711_104505

20160711_103245

ಪುರೋಹಿತ್ ಕಶೆಕೋಡಿ ಸೂರ್ಯನಾರಾಯಣ ಭಟ್ ಇವರು ಮಾತನಾಡಿ ಸರಸ್ವತಿಯು ನಾಲಿಗೆಯ ತುದಿಯಲ್ಲಿ ನೆಲೆಯಾಗಿದ್ದಾಳೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇರುವ ಪ್ರಕೃತಿಯಲ್ಲಿ ಆಕೆ ಸೇರಿಕೊಂಡಿದ್ದಾಳೆ. ಆದುದರಿಂದ ಪೂರ್ವಜರು ಪ್ರಕೃತಿಯಲ್ಲಿ ದೈವಿಕತೆಯಲ್ಲಿ ಕಂಡ ಫಲವಾಗಿ ಕಾಲ-ಕಾಲಕ್ಕೆ ಮಳೆ ಬೆಳೆ ಬರುವುದು ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ರವೀಂದ್ರ.ಪಿ, ಶಾಲಾ ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ಶೋಭಾ ಕೊಳತ್ತಾಯ ಮತ್ತು ಶ್ರೀ ಬಿರ್ಮಣ್ಣ ಗೌಡ, ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಸತೀಶ್ ಕುಮಾರ್ ರೈ, ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀ ರಾಮ ನಾಯಕ್, ಕೆ.ಜಿ.ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮಮತಾ, ಹಾಗೂ ಪ್ರಸ್ತುತ 2016-17 ನೇ ಶೈಕ್ಷಣಿಕ ವರ್ಷಕ್ಕೆ ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಅವರ ಹೆತ್ತವರು, ಮತ್ತು ಶಿಕ್ಷಕ ವೃಂದದವರು ಭಾಗವಹಿಸಿದ್ದರು. ಪೂಜೆಯ ಬಳಿಕ ಎಲ್ಲರಿಗೂ ಪ್ರಸಾದ ವಿತರಿಸಲಾಯಿತು.