QR Code Business Card

ಸಂಸ್ಕಾರ-ಸಾಹಿತ್ಯ ಸಂಘ ಉದ್ಘಾಟನೆ ಮತ್ತು ಸುಜ್ಞಾನ ಪುಸ್ತಕ ಬಿಡುಗಡೆ

ದಿನಾಂಕ 15-07-2017  ರಂದು ಸಂಸ್ಕಾರ-ಸಾಹಿತ್ಯ ಸಂಘ ಉದ್ಘಾಟನೆ ಮತ್ತು ಸುಜ್ಞಾನ ಪುಸ್ತಕ ಬಿಡುಗಡೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಹಿರಿಯ ಪೋಷಕರಾದ ಕಾಂಚನಮಾಲಾ ಕಾರ್ಯಕ್ರಮವನ್ನು ಉದ್ಘಾಟಸಿ, ಸಾಹಿತ್ಯವನ್ನು ಅನುಭವಿಸಬೇಕು. ಉಡುಪು ಮಾತ್ರ ಮನುಷ್ಯನನ್ನು ಸಭ್ಯನನ್ನಾಗಿಸುವುದಿಲ್ಲ. ನಮ್ಮ ಗುಣನಡತೆ ಎಲ್ಲವನ್ನು ನಿರ್ಧರಿಸುತ್ತದೆ. ಪರರ ಸುಖವೇ ನಮ್ಮ ಸಂತೋಷವಾಗಬೇಕು ಎಂದರು.

20160715_100001

20160715_110344

20160715_103309

20160715_105616

20160715_101248

20160715_112224

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಜಗಣೇಶ್, ಹಿರಿಯ ವಿದ್ಯಾರ್ಥಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಅವರು ಮಾತನಾಡಿ ಸಂಸ್ಕಾರ ಸಮಾಜದಲ್ಲಿ ಸಿಗುವಂತದ್ದಲ್ಲ. ಅದು ನಮ್ಮ ಮನಸ್ಸಿನಲ್ಲಿದೆ. ನಮ್ಮ ಗುರಿಯನ್ನು ನಮ್ಮ ಮನಸ್ಸಿಗೆ ಪದೇ ಪದೇ ತುಂಬಬೇಕು. ಅದಕ್ಕಾಗಿ ಪ್ರತಿನಿತ್ಯ ದೇವರ ಹೆಸರಿನಲ್ಲಿ ಪ್ರಾರ್ಥಿಸಿಬೇಕು. ಯುವ ಸಮಾಜದಲ್ಲಿ ಪ್ರಶ್ನಿಸುವ ಸ್ವಭಾವ ಬೆಳೆಸಬೇಕು ಎಂದರು.

ಸುಜ್ಞಾನ-ಮೌಲ್ಯಶಿಕ್ಷಣದ ಸುವಿಚಾರಗಳ ಪುಸ್ತಕದ ಬಿಡುಗಡೆಯನ್ನು ಶಾಲಾ ಆಡಳಿತ ಮಂಡಳಿ ಸದಸ್ಯರಾದ ಭಿರ್ಮಣ್ಣ ಗೌಡ ನೆರವೆರಿಸಿಕೊಟ್ಟರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸ್ಕಾರಯುತ ಜೀವನ ನಡೆಸಲು ಭಾರತೀಯ ಸಾಹಿತ್ಯ ಅವಶ್ಯಕವಾಗಿದೆ ಹಿರಿಯರನ್ನು ಗೌರವಿಸುವುದು ಕೂಡ ಸಂಸ್ಕಾರದ ಒಂದು ಭಾಗವಾಗಿದೆ ಎಂದರು. ವಿದ್ಯಾರ್ಥಿನಿಯರಾದ ಪಂಚಮಿ ಸರ್ಪಂಗಳ ಮತ್ತು ಪ್ರಿಯಂವದ ಕ್ರಮವಾಗಿ ಸಾಹಿತ್ಯ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಯನ್ನು ಅಧಿಕೃತವಾಗಿ ವಹಿಸಿಕೊಂಡರು. ಸಿಂಚನಲಕ್ಷ್ಮಿ ಭಜನೆಯಕುರಿತು ಚರ್ಚೆ, ವೈಷ್ಣವಿ ಸಾಹಿತ್ಯದ ಬಗ್ಗೆ ಚಿಂತನೆ ಮತ್ತು ಶಿಕ್ಷಕಿ ಮಧುರಾ ಜೋಶಿಯವರಿಂದ ಸ್ವರಚಿತ ಕವನ ವಾಚನ, ವಿದ್ಯಾರ್ಥಿಗಳಿಂದ ಸಾಮೂಹಿಕ ಭಜನೆ ನಡೆಯಿತು.

ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರು ಸತೀಶ್ ಕುಮಾರ್ ರೈ, ಪ್ರಾಥಮಿಕ ಶಾಲಾ ಮುಖ್ಯಗುರು ಶ್ರೀ ರಾಮ ನಾಕ್, ಕೆ.ಜಿ.ವಿಭಾಗದ ಮುಖ್ಯಸ್ಥೆ ಶ್ರೀಮತಿ ಮಮತಾ, ಶಿಕ್ಷಕಿ ಶ್ರೀಮತಿ ಪುಷ್ಪಲತಾ ಮತ್ತು ಶ್ರೀಮತಿ ಮಧುರಾ ಜೋಶಿ ಉಪಸ್ಥಿತರಿದ್ದರು.

ಶಿಕ್ಷಕಿ ಶ್ರೀಮತಿ ಸಾಯಿಗೀತಾ.ಎಸ್.ರಾವ್ ಸಂಸ್ಕಾರ-ಸಾಹಿತ್ಯ ಪುಸ್ತಕದ ಬಗ್ಗೆ ಪ್ರಾಸ್ತಾವಿಕ ಮಾತನ್ನಾಡಿದರು. ಮಧುಶ್ರೀ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಪುಷ್ಪಲತಾ ವಂದಿಸಿ ವಿದ್ಯಾರ್ಥಿನಿಯರಾದ ವೈಷ್ಣವಿ ಮತ್ತು ಮಧುಶ್ರೀ ಕಾರ್ಯಕ್ರಮ ನಿರೂಪಿಸಿದರು.

ಸುಜ್ಞಾನ-ಮೌಲ್ಯಶಿಕ್ಷಣದ ಸುವಿಚಾರಗಳ ಕಿರುಪರಿಚಯ:
‘ಸುಜ್ಞಾನ’ ಇದೊಂದು ಸುವಿಚಾರದ ಮೌಲ್ಯಗಳ ಧಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಪುಟ್ಟ ಕನಸಿನ ಕೂಸು ’ಸುಜ್ಞಾನ’ ಮೌಲ್ಯಶಿಕ್ಷಣ ಹೊತ್ತಿಗೆ. ಸುಜ್ಞಾನ ಹೊತ್ತಿಗೆಯ ಒಳಪುಟಗಳನ್ನು ಸರಿಸಿ ನೋಡಿದಾಗ ತರಗತಿವಾರು ಮಕ್ಕಳಲ್ಲಿ ಬೆಳೆಸಬೇಕಾದ ಮೌಲ್ಯಗಳನ್ನು ಕ್ರೋಢಿಕರಿಸಲಾಗಿದೆ. ಅಂತೆಯೆ ಭಕ್ತಿಯನ್ನು ಮೈಗೂಡಿಸಿಕೊಳ್ಳುವ ಭಜನೆಗಳು, ದೇಶಪ್ರೇಮವನ್ನು ಹೊರಹೊಮ್ಮಿಸುವ ದೇಶಭಕ್ತಿಗೀತೆಗಳು, ಮಹಾಪುರುಷರ ಜೀವನಗಾಥೆಗಳು ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳುವ ಕಥೆಗಳು, ಸುಭಾಷಿತಗಳು, ಶ್ಲೋಕಗಳು ಮುಂತಾದ ಜ್ಞಾನಭಂಡಾರವನ್ನು ಬಿತ್ತರಿಸಲಾಗಿದೆ. ಇಂತಹ ಸಂಸ್ಕಾರಯುತ ’ಸುಜ್ಞಾನ’ವನ್ನು ರಚಿಸುವಲ್ಲಿ ಪ್ರೋತ್ಸಾಹಕರಾಗಿ ನಿಂತವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿಕಾರ್ಯದರ್ಶಿ ಹಾಗೂ ಪ್ರಸ್ತುತ ಕಾರ್ಯಕಾರಿ ಸದಸ್ಯರಾಗಿರುವ ಶ್ರೀಯುತ ಶಿವಪ್ರಸಾದ್ ಇ. ಅವರು. ಅಂತೆಯೇ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕವೃಂದದವರು ಈ ನಿಟ್ಟನಲ್ಲಿ ಶ್ರಮಿಸಿದ್ದಾರೆ. ಇಲ್ಲಿ ಬಿತ್ತರಿಸಲಾದ ಮೌಲ್ಯಗಳ ಗೊಂಚಲನ್ನು ನೂರಾರು ಸಾವಿರಾರು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕೆಂಬ ಆಶಯದಿಂದಾಗಿ ಎಲ್ಲಾ ಶಾಲೆಗಳಲ್ಲೂ ’ಸುಜ್ಞಾನ’ ವನ್ನು ಮೌಲ್ಯಶಿಕ್ಷಣ ಹೊತ್ತಗೆಯಾಗಿ ಅಳವಡಿಸಿಲಾಗಿದೆ. ಸಂಸ್ಕಾರಯುತ ಶಿಕ್ಷಣವನ್ನೇ ಕೇಂದ್ರವಾಗಿರಿಸಿಕೊಂಡು ಎಲ್ಲಾ ವಿದ್ಯಾರ್ಥಿಗಳು ಸುಸುಂಸ್ಕೃತ ಪ್ರಜೆಗಳಾಗಿ ಹೊರಹೊಮ್ಮಬೇಕೆಂಬುದು ಸಂಘದ ಆಶಯವಾಗಿದೆ.