QR Code Business Card

ಶಟಲ್ ಬ್ಯಾಡ್ಮಿಂಟನ್ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ – ಜಿಲ್ಲಾಮಟ್ಟಕ್ಕೆ ಆಯ್ಕೆ

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ, ತೆಂಕಿಲ ಇಲ್ಲಿನ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಲಿಟ್ಲ್‌ಪ್ಲವರ್ ಶಾಲೆ, ದರ್ಬೆ ಇದರ ಆಶ್ರಯದಲ್ಲಿ ಸುಧಾನ ಸ್ಪೋಟ್ಸ್‌ಕ್ಲಬ್, ಸಾಮೆತಡ್ಕ ಇಲ್ಲಿ ಜರುಗಿದ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗದ ಬಾಲಕರು ಅಭಿಷೇಕ್ ಬಿಎಂ, ನಿತೀನ್ ಕುಮಾರ್, ಆದೀಶ್, ಮನೀಶ್ ಪಟ್ಲ, ದೀಪಕ್ ಗೌಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ೧೪ರ ವಯೋಮಾನದ ಬಾಲಕರ ವಿಭಾಗದ ಶಟಲ್ ಬ್ಯಾಡ್‌ಮಿಂಟನ್ ಸ್ಪರ್ಧೆಯಲ್ಲಿ ಅಭಿರಾಮ್.ಯು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಾಥಮಿಕ ವಿಭಾಗದಲ್ಲಿ ನೂತನ್.ಬಿ, ಆಶಿಷ್.ಕೆ.ಮಲ್ಲಾರ್, ಶ್ರೇಯಸ್.ಕೆ.ಆರ್, ಮನ್ವಿತ್ ಪಟ್ಲ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

Shuttle2

Shuttle1