QR Code Business Card

ವಿಜ್ಞಾನ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ

rakesh-krishna tushar-gopalದಿನಾಂಕ 15-09-2016 ಮತ್ತು 16-09-2016 ರಂದು ಕುಮುಟದಲ್ಲಿ ನಡೆದ ದಕ್ಷಿಣ ವಲಯದ ಅಂತರ್ ಜಿಲ್ಲಾ ವಿಜ್ಞಾನಕೂಟವಾದ ’ಇನ್‌ಸ್ಪೈರ್’ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ 7 ನೇ ತರಗತಿಯ ರಾಕೇಶ್‌ಕೃಷ್ಣ (ರವಿಶಂಕರ.ಕೆ ಮತ್ತು ಡಾ.ದುರ್ಗರತ್ನ ಇವರ ಪುತ್ರ) ಮತ್ತು 10ನೇ ತರಗತಿಯ ತುಷಾರ್ ಗೋಪಾಲ್ (ರವಿಕೃಷ್ಣ.ಡಿ ಮತ್ತು ಡಾ. ಅನುಪಮ ರವಿ. ಡಿ ಇವರ ಪುತ್ರ) -ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ವಿಜ್ಞಾನ ಮೇಳಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.