QR Code Business Card

ದೆಹಲಿ 2016ರ ರಾಷ್ಟ್ರಮಟ್ಟದ ಐರಿಸ್ ನ್ಯಾಶನಲ್ ಫೇರ್‌ಗೆ ಆಯ್ಕೆ

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಇಂಟೆಲ್ ಕಂಪೆನಿಯ ಸಹಯೋಗದೊಂದಿಗೆ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ನಡೆಯಲಿರುವ 2016ರ ರಾಷ್ಟ್ರಮಟ್ಟದ ಐರಿಸ್ ನ್ಯಾಶನಲ್ ಫೇರ್‌ನಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಸ್ವಸ್ತಿಕ್ ಪದ್ಮ ಭಾಗವಹಿಸಲು ಆಯ್ಕೆಯಾಗಿದ್ದಾನೆ. ಪ್ಲಾಮ- ಅನಾಲಿಸಿಸ್ ಎಂಡ್ ಡೆವಲಪ್ ಮೆಂಟ್ ಆಫ್ ಇಕೊ ಫ್ರೆಂಡ್‌ಲೀ ಮೆಟೀರಿಯಲ್ ಫ್ರಂ ವೇಸ್ಟ್ ಎಲ್.ಡಿ.ಪಿ.ಇ ಪ್ಲಾಸ್ಟಿಕ್ ಎಂಡ್ ಸ್ಯಾಂಡ್ ಎಂಬ ಪ್ರಾಜೆಕ್ಟ್ ಮೂಲಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರು ಉಪಯೋಗಿಸುವಲ್ಲಿ ಹೊಸ ಪ್ರಯೋಗವನ್ನು ಮಾಡಿ ಸಾಮಾಜಿಕ ಕಳಕಳಿಯನ್ನು ಬಿಂಬಿಸಿದ್ದಾನೆ ಎಂದು ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

swasthik-padma

ಈ ಪ್ರಾಜೆಕ್ಟ್ ವಿದ್ಯಾಭಾರತಿ ದಕ್ಷಿಣವಲಯ ಮಟ್ಟದ ಜ್ಞಾನ ವಿಜ್ಞಾನ ಮೇಳಕ್ಕೂ ಆಯ್ಕೆಯಾಗಿದ್ದು, ಎನ್.ಐ.ಟಿ.ಕೆ. ಸುರತ್ಕಲ್ ಇಲ್ಲಿ ನಡೆದ ಎನ್.ಜಿ.ಕನೆಕ್ಟ್-2016 ವಿಜ್ಞಾನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತದೆ. ಈತನು ಮುರ್ಗಜೆ ಶ್ರೀರಾಮ ಭಟ್ ಮತ್ತು ಮಲ್ಲಿಕಾ ಶ್ರೀರಾಮ ಇವರ ಪುತ್ರ.