QR Code Business Card

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶಮಂತ್ ರೈ ದಕ್ಷಿಣ ಭಾರತ ಮಟ್ಟಕ್ಕೆ

ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಬಳ್ಳಾರಿ, ಇವರು ಆಯೋಜಿಸಿದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸ್ಪರ್ಧಿಸಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾದ ಶಮಂತ್ ರೈ ಇವರು ಪ್ರದರ್ಶಿಸಿದ Green Industry ಮಾದರಿಗೆ ದ್ವಿತೀಯ ಬಹುಮಾನ, 2000/-ರೂ ನಗದು ಬಹುಮಾನ ಪಡೆದು ದಕ್ಷಿಣ ಭಾರತ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೆಯೇ ವಿಕ್ರಮ ಆಳ್ವ ಮತ್ತು ಲೋಕೆಂದರ್ ಸಿಂಗ್ ಇವರ ತಂಡದ ಪ್ರದರ್ಶಿಸಿದ Electricity from thermal wast ಈ ಮಾದರಿಯು ಪ್ರೋತ್ಸಾಹಕ ಬಹುಮಾನ ಪಡೆದಿದೆ. ಮುಂದಿನ ಹಂತದ ಸ್ಪರ್ಧೆಯು ಜನವರಿ 4 ರಿಂದ 9 ರವರೆಗೆ ಪುದುಚೆರಿಯಲ್ಲಿ ನಡೆಯಲಿರುವುದು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸತತವಾಗಿ ಮೂರನೇ ಬಾರಿಗೆ ದಕ್ಷಿಣ ಭಾರತ ಮಟ್ಟದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯವೆಂದು ಶಾಲಾ ಮುಖೋಪಾಧ್ಯಾಯರು ತಿಳಿಸಿರುತ್ತಾರೆ.

english-medium

ಶಮಂತ್ ರೈ ( ಹರೀಶ್ ರೈ ಮತ್ತು ಕವಿತಾ. ಎಚ್.ರೈ ದಂಪತಿ ಪುತ್ರ, ಮುಡಿಪಿನಡ್ಕ ),
ವಿಕ್ರಮ ಆಳ್ವ (ಕೃಷ್ಣಪ್ರಸಾದ್ ಆಳ್ವ ಮತ್ತು ವಿದ್ಯಾಪ್ರಸಾದ್ ಆಳ್ವ, ಚೆಲ್ಯಡ್ಕ)
ಲೋಕೆಂದರ್ ಸಿಂಗ್ (ರತನ್ ಸಿಂಗ್ ರಾಥೋಡ್ ಮತ್ತು ಸರೋಜಾ, ಪುತ್ತೂರು)