QR Code Business Card

ಚಿತ್ರಕಲಾ ಗ್ರೇಡ್ ಪರೀಕ್ಷೆಗಳು

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಬೆಂಗಳೂರು ಇವರು ನಡೆಸುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಗಳು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾಕೇಂದ್ರದಲ್ಲಿ 9-1-2017 ರಂದು ಆರಂಭಗೊಂಡವು. ಈ ಪರೀಕ್ಷಾ ಕೇಂದ್ರದಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಬಾಲವಿಕಾಸ ಪ್ರೌಢ ಶಾಲೆ ಮಾಣಿ, ಸುದಾನ ಪ್ರೌಢ ಶಾಲೆ ನೆಹರು ನಗರ, ನವೋದಯ ಪ್ರೌಢ ಶಾಲೆ ಬೆಟ್ಟಂಪಾಡಿ, ಸುಭೋದ ಪ್ರೌಢ ಶಾಲೆ ಪಾಣಾಜೆ, ಸರಕಾರಿ ಪದವಿಪೂರ್ವ ಕಾಲೇಜು ಪುತ್ತೂರು ಈ ಶಾಲೆಗಳ 99 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಲೋಯರ್‌ಗ್ರೇಡ್ ಹಾಗೂ 107 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹೈಯರ್‌ಗ್ರೇಡ್ ಪರೀಕ್ಷೆಗೆ ಹಾಜರಾಗಿರುತ್ತಾರೆ. ಸದ್ರಿ ಶಾಲೆಗಳ ಶಿಕ್ಷಕ-ಶಿಕ್ಷಕಿಯರಾದ ಮಹೇಶ್ ಹಿರೇಮಣಿ, ವೆಂಕಟೇಶ್ ಪ್ರಸಾದ್, ರುಕ್ಮಯ್ಯ, ದೀಪಕ್, ಜಗನ್ನಾಥ , ಐ. ಗೋಪಾಲಕೃಷ್ಣ ರಾವ್, ರಾಮಚಂದ್ರ ನಾಯಕ್, ರಾಜೇಂದ್ರ , ಶಿವಪ್ರಸಾದ್, ಶ್ರೀಮತಿ ಶಾರದಾ, ಪ್ರತಿಮಾ, ರಶ್ಮಿ ಶೆಟ್ಟಿ, ಕಸ್ತೂರಿ ನಾಯಕ್ ಇವರು ಕೊಠಡಿ ಪರಿವೀಕ್ಷಕರಾಗಿ ಸಹಕರಿಸಿದ್ದಾರೆಂದು ಕೇಂದ್ರದ ಮುಖ್ಯ ಅಧೀಕ್ಷಕರು ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್‌ಕುಮಾರ್ ರೈ ತಿಳಿಸಿದ್ದಾರೆ.

drawing-grade-exam