QR Code Business Card

ಹೊಸ ತಂತ್ರಜ್ಞಾನದ ಗಣಕಯಂತ್ರ ಕೊಡುಗೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ದಿನಾಂಕ 11-01-2017 ರಂದು ಹೊಸ ತಂತ್ರಜ್ಞಾನದ ಗಣಕಯಂತ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಆಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ನೂತನ ಗಣಕಯಂತ್ರವನ್ನು ಸಂಸ್ಥೆಯ ಪೋಷಕರಾದ ಡಾ.ಮಹೇಶ್ ಕುಮಾರ್.ವೈ, ಡಾ.ಮಾಲಾ ಮಹೇಶ್ ದಂಪತಿ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವೆಂಕಟೇಶ್ವರ ಅಮೈ ಹಾಗೂ ಸಂಚಾಲಕರಾದ ಮುರಳೀಧರ.ಕೆ, ಆಡಳಿತ ಮಂಡಳಿಯ ಖಜಾಂಜಿ ಪ್ರಸನ್ನ, ಆಡಳಿತ ಮಂಡಳಿಯ ಸದಸ್ಯರಾದ ಸುನೀತಾ ಶೆಟ್ಟಿ, ರೂಪಲೇಖ ಮತ್ತು ಶಾಲಾ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

vems-comp2

vems-comp1