QR Code Business Card

10 ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಸಂವಹನ

ಓದುವುದು, ಮನನಮಾಡುವುದು, ಪುನರಾವರ್ತನೆ, ಋಣಾತ್ಮಕ ಚಿಂತನೆಗಳನ್ನು ದೂರಮಾಡುವುದು ಜೀವನದಲ್ಲಿ ಮತ್ತು ಮುಂಬರುವ ಪರೀಕ್ಷೆಗಳನ್ನು ಎದುರಿಸಲು ಪೂರಕ ಅಂಶಗಳಾಗಿವೆ ಎಂದು ಪುತ್ತೂರಿನ ಖ್ಯಾತ ಕೌನ್ಸೆಲ್ಲರ್ ಹಾಗೂ ನರ-ಮಾನಸಿಕ ತಜ್ಞ ಡಾ| ಗಣೇಶ್ ಪ್ರಸಾದ್ ಮುದ್ರಜೆ ಹೇಳಿದರು. ಅವರು ದಿನಾಂಕ 3-2-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಸಂವಹನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಲವಾರು ವಿಷಯಗಳಲ್ಲಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಂಡರು. ವೇದಿಕೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ಮುರಳೀಧರ ಹಾಗೂ ಸದಸ್ಯರಾದ ಡಾ| ಸುರೇಶ್ ಪುತ್ತೂರಾಯ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದದವರು ಸಹಕರಿಸಿದ್ದರು.

Workshop