QR Code Business Card

10 ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 18-3-2017 ನೇ ಶನಿವಾರ ಇಲ್ಲಿನ 2016-17 ನೇ ಶೈಕ್ಷಣಿಕ ಸಾಲಿನ 10 ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಶಾಲಾ ಸಭಾಂಗಣದಲ್ಲಿ ನಡೆಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ವೆಂಕಟೇಶ್ವರ ಭಟ್ ಅಮೈ ಹಾಗೂ ಸಂಚಾಲಕರಾದ ಮುರಳೀಧರ.ಕೆ ಮಕ್ಕಳಿಗೆ ಶುಭ ಹಾರೈಸಿದರು.

10TH-FAREWELL

10 ನೇ ತರಗತಿ ವಿದ್ಯಾರ್ಥಿಗಳು 9 ನೇ ತರಗತಿಯ ವಿದ್ಯಾರ್ಥಿಗಳಿಗೆ ದೀಪ ಪ್ರದಾನ ಮಾಡಿ ಶಾಲಾ ಉಪನಾಯಕ ಕಿಶನ್ ಸ್ವಾಗತಿಸಿ, ಶಶಿರಾಜ್ ವಂದಿಸಿದರು. ಕುಮಾರಿ ಮೇಘ ಹಾಗೂ ಕುಮಾರಿ ದೀಪ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಉಪಹಾರದ ವ್ಯವಸ್ಥೆ ಮಾಡಲಾಯಿತು. ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ P.T.A ಅಧ್ಯಕ್ಷ ಡಾ| ಮುರಳೀಕೃಷ್ಣ ರೈ, ಆಡಳಿತ ಮಂಡಳಿ ಸದಸ್ಯ ಡಾ| ಸುರೇಶ ಪುತ್ತೂರಾಯ ಹಾಗೂ ಶ್ರೀಮತಿ ಸುನಿತಾ ಶೆಟ್ಟಿ ಉಪಸ್ಥಿತರಿದ್ದರು.