QR Code Business Card

ಜೆ.ಸಿ.ಐ. ವತಿಯಿಂದ ಕಾರ್ಯಾಗಾರ

ದಿನಾಂಕ 1-4-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಮತ್ತು ಜೆ.ಸಿ.ಐ, ಪುತ್ತೂರು ಆಶ್ರಯದಲ್ಲಿ 9 ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ದಿನದ ವಿಶೇಷ ಕಾರ್ಯಾಗಾರ ದರ್ಶನ್ ಕಲಾ ಮಂದಿರದ ಸಭಾಂಗಣದಲ್ಲಿ ನಡೆಯಿತು.

JCI

JCI1

ವೇದಿಕೆಯಲ್ಲಿ ಭಾರತೀಯ ರಾಷ್ಟ್ರೀಯ ಜೆ.ಸಿ.ಐ. ತರಬೇತುದಾರರಾದ ಸಂತೋಷ್ ಕುಮಾರ್ ಮತ್ತು ಪ್ರಮೋದ್ ಕುಮಾರ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ, ಆಂಗ್ಲ ಮಾಧ್ಯಮ ಶಾಲಾ ಹಳೇ ವಿದ್ಯಾರ್ಥಿನಿ ದೀಕ್ಷಾ ಪಾರ್ವತಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಗೆ 2 ವಿಭಾಗಗಳಲ್ಲಿ, ಹಾಗೂ ಮಧ್ಯಾಹ್ನ ಶಿಕ್ಷಕರಿಗೆ ವಿಶೇಷ ಕಾರ್ಯಗಾರವನ್ನು ಭಾರತೀಯ ರಾಷ್ಟ್ರೀಯ ಜೆ.ಸಿ.ಐ ತರಬೇತುದಾರರಾದ ಸಂತೋಷ್ ಕುಮಾರ್ ಮತ್ತು ಪ್ರಮೋದ್ ಕುಮಾರ್ ತರಬೇತಿಯನ್ನು ನೀಡಿದರು. ಜೆ.ಸಿ.ಐ ಅನ್ನಪೂರ್ಣ ಶರ್ಮ ವಂದಿಸಿ, ಜೆ.ಸಿ.ಐ ಪಶುಪತಿ ಶರ್ಮ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.