QR Code Business Card

ಉತ್ತಮ ಆರೋಗ್ಯಕ್ಕೆ ಯೋಗ ಪೂರಕ – ಶ್ರೀ ರಾಜೇಶ್ ಆಚಾರ್ಯ

ಮನುಷ್ಯನ ಸರ್ವತೋಮುಖ ಬೆಳೆವಣಿಗೆಗೆ ಆರೋಗ್ಯಕರ ಶರೀರ ಅಗತ್ಯ. ಆರೋಗ್ಯಕರ ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಯೋಗಭ್ಯಾಸ ಪೂರಕ ಎಂದು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ, ಎಸ್-ವ್ಯಾಸ ಬೆಂಗಳೂರು ಇದರ ಸಂಯೋಜಕ ಶ್ರೀ ರಾಜೇಶ್ ಆಚಾರ್ಯ ಹೇಳಿದರು. ಅವರು ದಿನಾಂಕ 3-4-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು ಮತ್ತು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ, ಎಸ್-ವ್ಯಾಸ, ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪದಲ್ಲಿ ಸಂಯೋಜಿಸಲಾಗಿರುವ 10 ದಿನಗಳ ಬೇಸಿಗೆ ಶಿಬಿರವನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು. ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ವೆಂಕಟೇಶ್ವರ ಅಮೈ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

vems-summercamp1

vems-summercamp2

ವೇದಿಕೆಯಲ್ಲಿ ಎಸ್-ವ್ಯಾಸ ಸಂಸ್ಥಾನದ ಸಂಪನ್ಮೂಲ ವ್ಯಕ್ತಿಗಳು, ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸಹಶಿಕ್ಷಕಿ ನಮಿತಾ ಸ್ವಾಗತಿಸಿ, ಸಹಶಿಕ್ಷಕಿ ದಿವ್ಯಾರಾಣಿ ವಂದಿಸಿದರು. ಸಹಶಿಕ್ಷಕಿ ಲತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

10 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಯೋಗ, ಸಂಸ್ಕೃತಿ, ಕರಕುಶಲ ವಸ್ತು ತಯಾರಿಕೆ, ಪೈಂಟಿಂಗ್, ಪೇಪರ್ ಕ್ರಾಫ್ಟ್, ಮೊದಲಾದ ಅಂಶಗಳಿದ್ದು ಶ್ರೀ ರಾಜೇಶ್ ಆಚಾರ್ಯ, ಶ್ರೀಮತಿ ಶರಾವತಿ, ಶ್ರೀ ವಸಂತ ಶಾಸ್ತ್ರಿ, ಶ್ರೀ ಪ್ರಸಾದ್ ಪಾಣಾಜೆ, ಮೈತ್ರೇಯ ಗುರುಕುಲದ ಹಾಗೂ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿವಿಧ ವಿಭಾಗಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮತ್ತು ಶಿಬಿರದ ಸಂಯೋಜಕರಾಗಿ ಸಹಶಿಕ್ಷಕ ಮಹೇಶ್ ಹಾಗೂ ಸಹಶಿಕ್ಷಕಿ ಶಾಂತಿ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ, ಇವರು ತಿಳಿಸಿರುತ್ತಾರೆ.