QR Code Business Card

ಸವಿ ಸಮ್ಮಿಲನ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು, ಇಲ್ಲಿ ಸುಮಾರು 29 ವರ್ಷಗಳಿಂದ ಅಟೆಂಡರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ನಾರಾಯಣ ಪೂಜಾರಿ ಮೇರಡ್ಕ ಇವರು ’ಸವಿ ಸಮ್ಮಿಲನ’ ವಿಶೇಷ ದಂಪತಿಗಳಿಗೆ ಕೊಡಮಾಡುವ ಸನ್ಮಾನಕ್ಕೆ ಭಾಜನರಾಗಿದ್ದಾರೆ.

ಎಪ್ರಿಲ್ 2 ರಂದು ಬಂಟ್ವಾಳದ ಕಜೆಕಾರು ಗ್ರಾಮದ ಅಂಬಟೆಮಾರು ಚಂದ್ರಾವತಿ ಮತ್ತು ಗಂಗಾಧರ ಪೂಜಾರಿ ದಂಪತಿಗಳ 37 ನೇ ವರ್ಷದ ವೈವಾಹಿಕ ಸಂಭ್ರಮದಂದು 42 ವಿವಿಧ ಜಾತಿ, ಧರ್ಮಿಯರಿಗೆ ಹಮ್ಮಿಕೊಂಡ ಈ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀಮತಿ ನಳಿನಿ ನಾರಾಯಣ ಮೇರಡ್ಕ ದಂಪತಿಗಳು ಈ ಸನ್ಮಾನ ಸ್ವೀಕರಿಸಿದ್ದಾರೆ. ಇವರಿಗೆ ಧಾರ್ಮಿಕ ಮತ್ತು ದೈವಾರಾಧನೆ ಕಾರ್ಯದಲ್ಲಿ ಸಲ್ಲಿಸಿದ ಸೇವೆಗಾಗಿ ಅವರಿಗೆ ಈ ಸನ್ಮಾನ ಸಂದಿದೆ ಎನ್ನುವುದು ವಿಶೇಷ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

sanmana

sanmana (1)