QR Code Business Card

ಸ್ವಸ್ತಿಕ್ ಪದ್ಮ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Swastik-PadmaINTEL ನ IRIS ರಾಷ್ಟ್ರ ಮಟ್ಟದ ವಿಜ್ಞಾನ ಸಂಶೋಧನಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ಮೇ 14 ರಿಂದ 23 ರ ವರೆಗೆ ಅಮೇರಿಕಾದ ಲಾಸ್ ಏಂಜಲೀಸ್ ನಲ್ಲಿ ನಡೆಯಲಿರುವ ISEF ಅಂತಾರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ತೆರಳುತ್ತಿದ್ದಾರೆ.

ಇವರು ನಿರುಪಯುಕ್ತ, ತ್ಯಾಜ್ಯ ಪ್ಲಾಸ್ಟಿಕ್ ಹಾಗೂ ಕೈಗಾರಿಕಾ ತ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿ ಅನೇಕ ವಿಧದ ಉಪಯುಕ್ತ ವಸ್ತುಗಳನ್ನು ತಯಾರಿಸಬಹುದು ಎಂಬ ಪ್ರಯೋಗಬದ್ಧ ಸಂಶೋಧನೆಯನ್ನು ಮಾಡಿರುತ್ತಾರೆ ಹಾಗೂ ಈ ಸಂಶೋಧನೆಗೆ ASM(American Standard Materials) ಅವಾರ್ಡ್ ಪಡೆದ ಭಾರತದ ಏಕೈಕ ವಿದ್ಯಾರ್ಥಿಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ. ಇವರು ಶ್ರೀರಾಮ ಭಟ್ ಮುರ್ಗಜೆ ಮತ್ತು ಮಲ್ಲಿಕ ದಂಪತಿ ಪುತ್ರ.