QR Code Business Card

ಐರಿಸ್ ವಿಜ್ಞಾನ ಶಿಬಿರಕ್ಕೆ ರಾಕೇಶಕೃಷ್ಣ ಆಯ್ಕೆ

Rakesh krishna

ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ರಾಕೇಶ ಕೃಷ್ಣ ಅವರು ಆರನೇ ರಾಷ್ಟ್ರ ಮಟ್ಟದ ಇನ್‌ಸ್ಪಯರ್ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದರು. ಅವರನ್ನು ವಿಜ್ಞಾನ ಕ್ಷೇತ್ರದ ಈ ಸಾಧನೆಗಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಅಭಿನಂದಿಸಿದ್ದಾರೆ.

ಈಗ ಅವರು IRIS(Iniative for Resource & Innovation in Science)ನ ವತಿಯಿಂದ ಇದೇ ಮೇ೨೫ ಮತ್ತು ೨೬ರಂದು ಚೆನೈನಲ್ಲಿ ನಡೆಯುವ ವಿಜ್ಞಾನ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಈ ಸಾಧನೆಯನ್ನು ಮಾಡಿ ವಿಜ್ಞಾನ ಶಿಬಿರಕ್ಕೆ ನೇರವಾಗಿ ಆಯ್ಕೆಯಾದ ಅತಂತ್ಯ ಕಿರಿಯ ವಿದ್ಯಾರ್ಥಿಯಾಗಿದ್ದಾರೆ.

ಇದೇ ಶಾಲೆಯ ಹಳೆ ವಿದ್ಯಾರ್ಥಿನಿಯಾಗಿದ್ದು ಪ್ರಸ್ತುತ ತಿರುವನಂತಪುರದ(IRIS) ಇಂಡಿಯನ್ ಇನ್‌ಸ್ಟಿಟ್ಯುಟ್ ಆಫ್ ಸಯನ್ಸ್ ಎಜುಕೇಶನ್ ಮತ್ತು ರೀಸರ್ಚನಲ್ಲಿ ಎಂ.ಎಸ್ ವಿಭಾಗದ ವಿದ್ಯಾರ್ಥಿನಿಯಾಗಿರುವ ತನ್ನ ಸಹೋದರಿ ರಶ್ಮಿ ಪಾರ್ವತಿಯವರ ಮಾರ್ಗದರ್ಶನದಲ್ಲಿ ಸೀಡೋಗ್ರಾಫರ್, ಎ ನಾವೆಲ್ ಸೀಡರ್ ಫಾರ್ ಸಿಸ್ಟಮ್ಯಾಟಿಕ್ ಕಲ್ಟಿವೇಶನ್ ಎಂಬ ವಿಜ್ಞಾನ ಮಾದರಿಯನ್ನು ರಾಕೇಶ ಕೃಷ್ಣ ರೂಪುಗೊಳಿಸಿದರು.

ಇವರು ವಿವೇಕಾನಂದ ಪದವಿ ಕಾಲೇಜ್‌ನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ| ದುರ್ಗಾರತ್ನ ಮತ್ತು ನೆಕ್ಕಿಲದ ಕೃಷಿಕ ರವಿಶಂಕರ ದಂಪತಿ ಪುತ್ರ.