QR Code Business Card

5 ನೇ ತರಗತಿ ರಕ್ಷಕ-ಶಿಕ್ಷಕ ಸಭೆ

ದಿನಾಂಕ 14-7-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5 ನೇ ತರಗತಿ ರಕ್ಷಕ-ಶಿಕ್ಷಕ ಸಭೆಯು ನಡೆಯಿತು. ಈ ಸಭೆಯಲ್ಲಿ ಅಧ್ಯಕ್ಷರಾಗಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಡಾ.ರವಿಶಂಕರ ಪೆರ್ವಾಜೆ ಅವರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಗೀತಾ ಕುಂಕೋಡಿ ಅವರು ಆಗಮಿಸಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಮೌಲ್ಯಧಾರಿತ ಭಾರತೀಯ ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕು ಅದು ಈ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ದೊರೆಯುತ್ತಿದೆ ಎಂಬ ಮಾತನ್ನು ನುಡಿದರು. ನಂತರ ರಕ್ಷಕ-ಶಿಕ್ಷಕ ಸಂಘದ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಶ್ರೀಮತಿ ಸುಜಾತ ಪ್ರಾರ್ಥಿಸಿ, ಶ್ರೀಮತಿ ಶಾಂತಿ ಸ್ವಾಗತಿಸಿದರು. ಶ್ರೀಮತಿ ಸುಜಾತ ವಂದಿಸಿ, ಕು.ಹಿತಾ ಕಾರ್ಯಕ್ರಮ ನಿರೂಪಿಸಿದರು.

5th std meeting