QR Code Business Card

7ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆ

ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಮನೆ ಹಾಗೂ ಶಾಲೆಯ ವಾತಾವರಣ ಪೂರಕ. ಪೋಷಕರು ಹಾಗೂ ಶಿಕ್ಷಕರು ಮಗುವಿನ ಭವಿಷ್ಯವನ್ನು ರೂಪಿಸುವವರಾಗಬೇಕು ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವೆಂಕಟೇಶ್ವರ ಅಮೈ ಹೇಳಿದರು. ಅವರು ದಿನಾಂಕ 20-7-2017 ರಂದು ಶಾಲಾ ಸಭಾಂಗಣದಲ್ಲಿ 7ನೇ ತರಗತಿಯ ಪೋಷಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಪ್ರಾಥಮಿಕ ಶಾಲಾ ಮುಖ್ಯಸ್ಥ ರಾಮ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢ ವಿಭಾಗದ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಶಾಲೆಯ ಈ ವರೆಗಿನ ಸಾಧನೆಗಳನ್ನು ಪರಿಚಯಿಸಿದರು. ಸಹಶಿಕ್ಷಕಿ ಶ್ರೀಮತಿ ರಶ್ಮಿ ಶೆಟ್ಟಿ ಸ್ವಾಗತಿಸಿ, ಶ್ರೀಮತಿ ಸುಮಲತಾ ವಂದಿಸಿದರು. ಕುಮಾರಿ ಶ್ರೀನಿಧಿ ಆಳ್ವ ಕಾರ್ಯಕ್ರಮ ನಿರೂಪಿಸಿದರು.

7th meetning