QR Code Business Card

ಕಾರ್ಗಿಲ್ ವಿಜಯ್ ದಿವಸ್ ಆಚರಣೆ

ಗಡಿಯಲ್ಲಿ ದೇಶರಕ್ಷಣೆ ಮಾಡುತ್ತಿರುವ ಸೈನಿಕರು ಸದಾ ಪ್ರಾತ:ಸ್ಮರಣೀಯರು. ತಮ್ಮ ಜೀವದ ಹಂಗು ತೊರೆದು ಶತ್ರುಗಳಿಂದ ದೇಶವನ್ನು ಸದಾ ಕಾಯುತ್ತಿರುವ ನಮ್ಮ ಹೆಮ್ಮೆಯ ಸೈನಿಕರನ್ನು ಯಾವಾಗಲೂ ನೆನೆಯಬೇಕು ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮೇಲ್ವಿಚಾರಕ ಹಾಗೂ ನಿವೃತ್ತ ವಾಯುಸೇನಾ ಅಧಿಕಾರಿ ಸಾರ್ಜೆಂಟ್ ಶ್ರೀ ಶಾಮ್ ಪ್ರಸಾದ್ ಹೇಳಿದರು.

Kagril vijay diwas 2017 (1)

Kagril vijay diwas 2017

ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 29-7-2017 ರಂದು ಕಾರ್ಗಿಲ್ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಸೇನೆಯ ಮೂರೂ ವಿಭಾಗಗಳು ಯಾವ ರೀತಿ ಪರಸ್ಪರ ಕೈಜೋಡಿಸಿ ಸಹಕರಿಸಿವೆ ಎಂದು ಅವರು ವಿವರಿಸಿದರು. ವೇದಿಕೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಪ್ರಾಥಮಿಕ ವಿಭಾಗ ಮುಖ್ಯೋಪಾಧ್ಯಾಯ ರಾಮ ನಾಯ್ಕ್ ಉಪಸ್ಥಿತರಿದ್ದರು. ವಿದ್ಯಾರ್ಥಿ ರಾಹುಲ್. ಎಸ್. ರಾವ್ ಸ್ವಾಗತಿಸಿ, ಶಾಲಾ ವಿದ್ಯಾರ್ಥಿ ನಾಯಕ ಅಭಿಲಾಷ್ ವಂದಿಸಿದರು. ಅನನ್ಯಾ. ಎ. ಎಸ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರು ದೇಶಭಕ್ತಿಗೀತೆ ಹಾಡಿದರು. ಶಾಲಾ ಶಿಕ್ಷಕರು ಸಹಕರಿಸಿದರು.