QR Code Business Card

ಪೂರ್ವ ಪ್ರಾಥಮಿಕ ಪೋಷಕರ ಮಾರ್ಗದರ್ಶನ ಸಭೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪೂರ್ವ ಪ್ರಾಥಮಿಕ ಮಕ್ಕಳ ಪೋಷಕರ ಸಭೆ ದಿನಾಂಕ 30-7-2017 ರಂದು ಶಾಲಾ ಸಭಾಂಗಣದಲ್ಲಿ ಜರಗಿತು. ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಮನೆ, ಪೋಷಕರು ಮತ್ತು ಶಿಕ್ಷಕರು ಸಮಾನ ಭಾಗೀದಾರರು. ಸಾಮರ್ಥ್ಯಕ್ಕಿಂತ ಅಧಿಕ ವಿಚಾರಗಳನ್ನು ಹೇರಿದರೆ ಮಗುವಿನ ಭವಿಷ್ಯ ಹಾನಿಗೊಳಗಾಗುತ್ತದೆ. ಇದು ಕಾಸರಗೋಡು ಚಿನ್ಮಯ ವಿದ್ಯಾಲಯದ ಶ್ರೀ ಪುಷ್ಪರಾಜ್ ಅಭಿಮತ. ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪೂರ್ವಪ್ರಾಥಮಿಕ ಪೋಷಕರ ತರಬೇತಿ ಕಾರ್ಯಾಗಾರದಲ್ಲಿ ಮಾರ್ಗದರ್ಶನ ನೀಡುತ್ತಿದ್ದರು.

vems-PTA

ಶಾಲಾ ಆಡಳಿತ ಮಂಡಳಿ ಸಂಚಾಲಕ ಶ್ರೀ ಮುರಳೀಧರ್ ಅಧ್ಯಕ್ಷೀಯ ನೆಲೆಯಲ್ಲಿ ಮರ್ಗದರ್ಶನದ ಅವಶ್ಯಕತೆಯನ್ನು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಾಸ್ತಾವಿಕ ಮತುಗಳನ್ನಾಡಿದರು. ಪೂರ್ವ ಪ್ರಾಥಮಿಕ ವಿಭಾಗ ಮುಖ್ಯಸ್ಥೆ ಶ್ರೀಮತಿ ಮಮತಾ ಉಪಸ್ಥಿತರಿದ್ದರು. ಶ್ರೀಮತಿ ಆಶಾ ಶೆಟ್ಟಿ ಸ್ವಾಗತಿಸಿ, ರಮ್ಯಾ ವಂದಿಸಿದರು. ಕುಮಾರಿ ಪ್ರಿಯಾ ಮತ್ತು ಶ್ರೀಮತಿ ಸೌಮ್ಯಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.