QR Code Business Card

ರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾಟ – ಪ್ರಥಮ ಸ್ಥಾನ

ವಿದ್ಯಾಭಾರತಿ ಅಖಿಲ ಭಾರತೀಯ ಹಾಗೂ ಶ್ರೀ ಮದ್‌ಭಗವದ್ಗೀತಾ ವರಿಷ್ಠಾ ಮಾಧ್ಯಮಿಕ ವಿದ್ಯಾಲಯ ಕುರುಕ್ಷೇತ್ರ, ಹರಿಯಾಣ ಇಲ್ಲಿ ಸೆ. 16 ರಿಂದ 18 ರವರೆಗೆ ನಡೆದ ರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

vems-chess-winners

14 ರ ವಯೋಮಾನದ ಬಾಲವರ್ಗ ಬಾಲಕರ ವಿಭಾಗದಲ್ಲಿ ಪಂಕಜ್ ಭಟ್, 6ನೇ ತರಗತಿ, (ಡಾ.ಎಸ್.ಎಂ.ಪ್ರಸಾದ್ ಮತ್ತು ಪಾವನಾ ಇವರ ಪುತ್ರ) ಸಾತ್ವಿಕ್ ಶಿವಾನಂದ.ಪಿ.ಎಸ್, 8ನೇ ತರಗತಿ, (ಶ್ರೀರಾಮ ಪಾಟಾಜೆ ಮತ್ತು ಶಿಲ್ಪರವರ ಪುತ್ರ), ಮನ್ವಿತ್ ಕಣಾಜಾಲು, 6ನೇ ತರಗತಿ, (ದಾಮೋದರ ಮತ್ತು ರಶ್ಮಿರವರ್ ಪುತ್ರ), ಗಗನ್.ಎಂ.ಎಸ್, 8ನೇ ತರಗತಿ, (ಶಿವರಾಮ ಎಂ.ಎಸ್ ಮತ್ತು ಮಮತರವರ ಪುತ್ರ) ಧ್ರುವ.ಪಿ, 6ನೇ ತರಗತಿ, (ಮೋಹನದಾಸ್ ಮತ್ತು ಆಶಾರವರ ಪುತ್ರ) ಪ್ರಥಮ ಸ್ಥಾನ ಪಡೆದಿದ್ದು, ಮುಂದೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆಯಲಿರುವ ರಾಷ್ಟ್ರಮಟ್ಟದ ಎಸ್.ಜಿ.ಎಫ್.ಐ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆ ತಿಳಿಸಿರುತ್ತಾರೆ.