QR Code Business Card

ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ದ.ಕ.ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಕೆಯ್ಯೂರು ಇದರ ಆಶ್ರಯದಲ್ಲಿ ಅಕ್ಟೋಬರ್ 3 ಮತ್ತು 4 ರಂದು ಕೆಯ್ಯೂರು ಶಾಲಾ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ ಬಂಟ್ವಾಳ ಎಸ್.ವಿ.ಎಸ್ ವಿದ್ಯಾಸಂಸ್ಥೆಗಳಲ್ಲಿ ಅಕ್ಟೋಬರ್ 6 ಮತ್ತು 7 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಾಥಮಿಕ ವಿಭಾಗದ ಬಾಲಕರು ತಂಡ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

IMG_20171005_153555

ಬಾಲಕರ ವಿಭಾಗದಲ್ಲಿ ಹೈಪೋರ್ಮಿ ಉದ್ದಜಿಗಿತ, 80 ಮೀ. ಹರ್ಡಲ್ಸ್ ಪ್ರಥಮ ಮತ್ತು 4×100 ರಿಲೇ ದ್ವಿತೀಯ, ಪಿರ್ಕಾಟ್ ಗುಂಡೆಸೆತ ಮತ್ತು 200 ಮೀ 4×100 ರಿಲೇ ದ್ವಿತೀಯ, 100 ಮೀ ತೃತೀಯ, ಶ್ರೇಯಸ್ ದೀಕ್ಷಿತ್ 4×100 ರಿಲೇ ದ್ವಿತೀಯ, ಲಕಾಮ್ 4×100 ರಿಲೇ ದ್ವಿತೀಯ ಸ್ಥಾನ ಪಡೆದು, ಪ್ರಾಥಮಿಕ ವಿಭಾಗದ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

8ನೇ ತರಗತಿ ಬಾಲಕರ ವಿಭಾಗದಲ್ಲಿ ಚಿರಾಗ್ ಮನೋಹರ್ ರೈ ಚಕ್ರ ಎಸೆತ ಪ್ರಥಮ ಮತ್ತು ಚಿರಾಯು ಮನೋಹರ್ ರೈ ಗುಂಡೆಸೆತ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ಚರಿತಾ. ಬಿ.ಆರ್ 80 ಮೀ. ಹರ್ಡಲ್ಸ್ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ. ಪ್ರೌಢ ಶಾಲಾ ಬಾಲಕರ ವಿಭಾಗದಲ್ಲಿ ವಿನೀತ್. ಜಿ.ಆರ್ ಹ್ಯಾಮರ್ ಎಸೆತ, ಚಕ್ರ ಎಸೆತ ಪ್ರಥಮ, ಗುಂಡೆಸೆತ ದ್ವಿತೀಯ ಹಾಗೂ ಬಾಲಕಿಯರ ವಿಭಾಗದಲ್ಲಿ ಹಿಮಾನಿ.ಜಿ 400 ಮೀ ಪ್ರಥಮ, 200 ಮೀ ದ್ವಿತೀಯ, 100 ಮೀ ತೃತೀಯ ಹಾಗೂ ಪ್ರಣಮ್ಯಾ ಶೆಟ್ಟಿ ಗುಂಡೆಸೆತ, ಚಕ್ರ ಎಸೆತ, ಜಾವೆಲಿನ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ. ಪ್ರೌಢ ವಿಭಾಗದಲ್ಲಿ ವಿನೀತ್.ಜಿ.ಆರ್ ಮತ್ತು ಪ್ರಣಮ್ಯಾ ಶೆಟ್ಟಿ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ತಿಳಿಸಿರುತ್ತಾರೆ.