QR Code Business Card

Smart Class Educational Services ತಂತ್ರಜ್ಞಾನದ ಲೋಕಾರ್ಪಣೆ ಕಾರ್ಯಕ್ರಮ

ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದಿನಾಂಕ 25-10-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿ ಸುಸಜ್ಜಿತ ಸುಜ್ಞಾನ ಗ್ರಂಥಾಲಯ, ದ್ರೋಣಾಚಾರ್ಯ-ಕ್ರೀಡಾ ಸಮುಚ್ಛಯ, ಸೃಷ್ಟಿ-ಕಲಾ ಕುಟೀರ, ಇ-ಶಿಕ್ಷಣವನ್ನು ಅಳವಡಿಸಿಕೊಂಡ Smart Class Educational Services ತಂತ್ರಜ್ಞಾನದ ಲೋಕಾರ್ಪಣೆ ಕಾರ್ಯಕ್ರಮವು ನಡೆಯಿತು.

CHE_3206

CHE_3238

CHE_3242

CHE_3262

CHE_3271

ಸೃಷ್ಟಿ-ಕಲಾ ಕುಟೀರ ಹಾಗೂ ಇ-ಶಿಕ್ಷಣವನ್ನು ಅಳವಡಿಸಿಕೊಂಡ Smart Class Educational Services ತಂತ್ರಜ್ಞಾನವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಇವರು ಉದ್ಘಾಟಿಸಿ ಶುಭ ಹಾರೈಸಿದರು.

ದ್ರೋಣಾಚಾರ್ಯ-ಕ್ರೀಡಾ ಸಮುಚ್ಛಯವನ್ನು ಶಾಲಾ ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ಸುನೀತಾ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸುಜ್ಞಾನ ಗ್ರಂಥಾಲಯವನ್ನು ಶಾಲಾ ಆಡಳಿತ ಮಂಡಳಿ ಸದಸ್ಯ ಶ್ರೀ ಚಂದ್ರಶೇಖರ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಶ್ರೀಮತಿ ಕವಿತಾ ಸತೀಶ್ ಪ್ರಾರ್ಥಿಸಿ, ಶಾಲಾ ಸಂಚಾಲಕರಾದ ಮುರಳೀಧರ.ಕೆ ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ವಂದಿಸಿದರು. ಶ್ರೀಮತಿ ಸೌಮ್ಯ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ, ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು, ಹಾಗೂ ಎಜ್ಯುಕೋಮ್ ತಂಡ ಉಪಸ್ಥಿತರಿದ್ದರು.