QR Code Business Card

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆ

ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ನವೆಂಬರ್ 6 ರಿಂದ 12 ರ ವರೆಗೆ ಮಧ್ಯಪ್ರದೇಶದ ಭೋಪಾಲ್ ನಡೆಯುವ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 10 ನೇ ತರಗತಿಯ ವಿದ್ಯಾರ್ಥಿಗಳಾದ ವಿನೀತ್ ಜಿ.ಆರ್ ಚಕ್ರ ಎಸೆತ ಸ್ಪರ್ಧೆಗೆ ಹಾಗೂ ಹಿಮಾನಿ.ಜಿ 4×100 ಮೀ ರಿಲೇ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ವಿನೀತ್.ಜಿ.ಆರ್, ರಾಮಚಂದ್ರ ಜಿ. ಮತ್ತು ಸುನೀತಾ.ಎಂ, ಪರ್ಲಡ್ಕ ಇವರ ಪುತ್ರ ಹಾಗೂ ಹಿಮಾನಿ ಜಿ., ಇವಳು ಪದ್ಮನಾಭ ಗೌಡ ಜಿ. ಮತ್ತು ಕವಿತಾ ಜಿ. ಪರ್ಲಡ್ಕ ಇವರ ಪುತ್ರಿ.

sports