QR Code Business Card

ವಿದ್ಯಾಭಾರತಿ ದಕ್ಷಿಣ ಭಾರತ ಮಟ್ಟದ ಜ್ಞಾನ-ವಿಜ್ಞಾನ ಮೇಳ : ರಾಷ್ಟ್ರ ಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಸಂಸ್ಥೆ ಆಯೋಜಿಸಿದ ದಕ್ಷಿಣ ಭಾರತ ಮಟ್ಟದ ಜ್ಞಾನ -ವಿಜ್ಞಾನ ಮೇಳವು ಹೈದರಾಬಾದ್‌ನ ಸರಸ್ವತಿ ವಿದ್ಯಾಲಯದಲ್ಲಿ ಇತ್ತೀಚೆಗೆ ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕನ್ಯಾ ಶೆಟ್ಟಿ(8ನೇ)-ಸಂಸ್ಕೃತಿ ಜ್ಞಾನ ಪತ್ರವಾಚನ-ಪ್ರಥಮ ಯಶಸ್ವಿನಿ ಶೆಟ್ಟಿ(7ನೇ)-ವಿಜ್ಞಾನ ಪತ್ರವಾಚನ ಪ್ರಥಮ, ಸುಮೇಧಾ ನಾವಡ(8ನೇ)-ಕಂಪ್ಯೂಟರ್ ಮಾದರಿ ರಚನೆ-ಪ್ರಥಮ, ನಿಶ್ಚಯ್ ರೈ(8ನೇ)-ವಿಜ್ಞಾನ ಮಾದರಿ-ಪ್ರಥಮ, ಸುಶ್ರುತ್(8ನೇ) -ವಿಜ್ಞಾನ ಮಾದರಿ-ದ್ವಿತೀಯ, ತೇಜಸ್(8ನೇ) -ವಿಜ್ಞಾನ ಮಾದರಿ-ದ್ವಿತೀಯ, ನಿಖಿಲಾ(10ನೇ)-ವಿಜ್ಞಾನ ಮಾದರಿ-ದ್ವಿತೀಯ, ಚರಣ್(10ನೇ) -ವಿಜ್ಞಾನ ಮಾದರಿ-ದ್ವಿತೀಯ, ಧ್ಯಾನ್.ಎಸ್.ರಾವ್(9ನೇ)-ವಿಜ್ಞಾನ ಮಾದರಿ-ದ್ವಿತೀಯ ಸ್ಥಾನ. ಇವರು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆಯಲಿರುವ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಜ್ಞಾನ-ವಿಜ್ಞಾನ ಮೇಳ ಸ್ಪರ್ಧೆಯಲ್ಲಿ ಭಾಗವಹಿಸಲಿರುವರು ಎಂದು ಶಾಲಾ ಪ್ರಕಟಣೆಯಲ್ಲಿ ತಿಳಿಸಿದೆ.

IMG20171113100839