QR Code Business Card

ಸಿಂಚನಾಲಕ್ಷ್ಮಿ- ಜಿಲ್ಲಾ ಯುವ ವಿಜ್ಞಾನಿ

SINCHANA-LAXMIದಿನಾಂಕ 22.11.2017 ರಂದು ಮೂಡುಬಿದ್ರೆಯ ರೋಟರಿ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ ಜಿಲ್ಲಾಮಟ್ಟದ  25 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೇಸ್­ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ವಿಭಾಗದ “Accident Prevention and Automatic speed control” ಎಂಬ ಯೋಜನಾ ವರದಿಯು ಪ್ರಥಮ ಸ್ಥಾನ ಪಡೆದುಕೊಂಡಿದೆ. ತಂಡದ ನಾಯಕಿ 9 ನೇ ತರಗತಿಯ ಸಿಂಚನಲಕ್ಷ್ಮಿಯು (ಬಂಗಾರಡ್ಕ ಮುರಳೀಧರ ಭಟ್ ಮತ್ತು ಶೋಭಾ ಎಂ. ವಿ. ಇವರ ಪುತ್ರಿ) ಜಿಲ್ಲಾ ಯುವ ವಿಜ್ಞಾನಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. ಶಿಕ್ಷಕಿಯರಾದ ಶ್ರೀಮತಿ ಶಾಂತಿ, ಶ್ರೀಮತಿ ಶಾರದಾ ಶೆಟ್ಟಿ ಮತ್ತು ಶ್ರೀಮತಿ ಸಂಧ್ಯಾ ಇವರ ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.