QR Code Business Card

ವಿವೇಕಾನಂದ ಜಯಂತಿ

ದಿನಾಂಕ 11-1-2018 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಮತಿ ತುಳಸಿ ಶಿರ್ಲಾಲು ಇವರು ಮಾತನಾಡಿ ಪ್ರತಿ ಮಗುವಿನಲ್ಲಿ ವಿವೇಕಾನಂದ ಆದರ್ಶಗಳು ಮೈಗೂಡಿದಾಗ ನಿಜವಾದ ಭಾರತ ನಿರ್ಮಾಣವಾಗುವುದು. ವಿವೇಕಾನಂದರು ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿ ಗುಲಾಮಗಿರಿಯಿಂದ ತೊಳಲಾಡುತ್ತಿದ್ದ ಭಾರತವನ್ನು ತಮ್ಮ ಮಾತಿನ ಮೂಕ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದರು ಎಂದರು.

vivekananda jayanthi (2)

vivekananda jayanthi (1)

vivekananda jayanthi (3)

vivekananda jayanthi

ವೇದಿಕೆಯಲ್ಲಿ ಹಿರಿಯ ಅಧ್ಯಾಪಕಿ ಶ್ರೀಮತಿ ಮೋಹಿನಿ.ಕೆ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್‌ಕುಮಾರ್‌ ರೈ, ಪ್ರಾಥಮಿಕ ಶಾಲಾ ಮುಖ್ಯಗುರು ಶ್ರೀ ರಾಮ ನಾಯ್ಕ್, ಕೆ.ಜಿ.ವಿಭಾಗದ ಮುಖ್ಯಸ್ಥೆ ಶ್ರೀಮತಿ ಮಮತಾ ಆರ್. ಉಪಸ್ಥಿತರಿದ್ದರು. ಶಿಕ್ಷಕಿ ವೀಣಾ ಜೋಶಿ ಸ್ವಾಗತಿಸಿ, ಶಾಲಾ ಉಪನಾಯಕ ಅದಿತಿ ವಂದಿಸಿ, ವಿದ್ಯಾರ್ಥಿ ಅವನೀಶ್‌ ಕಾರ್ಯಕ್ರಮ ನಿರೂಪಿಸಿದರು. ಪುಟಾಣಿ ಮಕ್ಕಳು ವಿವೇಕಾನಂದರ ವೇಷ ಹಾಕಿ ಸಂಭ್ರಮಿಸಿದರು. ಮಧ್ಯಾಹ್ನ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ, ಹಾಗೂ ಪೋಷಕರಿಗೆ ಊಟ-ಉಪಚಾರ ನೀಡಲಾಯಿತು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.