QR Code Business Card

ಗಣರಾಜ್ಯೋತ್ಸವ ಆಚರಣೆ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇಲ್ಲಿದಿನಾಂಕ 26-1-2018 ರಂದು 69 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ನಿವೃತ್ತ ಸೇನಾಧಿಕಾರಿ ಶೇಷಪ್ಪ ಗೌಡ ಅಡಿಲು ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ದೇಶ ಸೇವೆಯನ್ನು ಮಾಡುವುದು ನಮ್ಮ ತಾಯಿಯ ಸೇವೆಯನ್ನು ಮಾಡಿದಂತೆ ಎಂದು ಮಕ್ಕಳಿಗೆ ಸಂದೇಶ ನೀಡಿದರು. ಇನ್ನೋರ್ವ ಮುಖ್ಯ ಅತಿಥಿ ನಿವೃತ್ತ ಸೇನಾಧಿಕಾರಿ ಶ್ರೀ ಸುಂದರ ಕೆ. ಇವರು ಮಾತನಾಡಿ ಇಂದಿನ ಲಂಚಗುಳಿತನ ಇಲ್ಲದ ಏಕೈಕ ಕ್ಷೇತ್ರ ಎಂದರೆ ಸೇನಾ ಕ್ಷೇತ್ರ ಮಾತ್ರ. ಎಲ್ಲ ಮಕ್ಕಳು ಸೈನ್ಯಕ್ಕೆ ಸೇರಿ ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಲಂಚಮುಕ್ತ ದೇಶವನ್ನಾಗಿಸಿ ಎಂದು ಹೇಳಿದರು.

vems-republic day

vems-republic day (1)

vems-republic day (2)

ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿ ಶ್ರೀ ಜಯರಾಮಗೌಡ ಸಂಪ್ಯ, ಶ್ರೀ ಪ್ರಭಾಕರ್, ಸೀನಿಯರ್ ಮೆನೇಜರ್, ಕೆನರಾ ಬ್ಯಾಂಕ್ ಪುತ್ತೂರು, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಸರ್ವಸದಸ್ಯರು, ಅಧ್ಯಕ್ಷರು, ಸರ್ವಸದಸ್ಯರು, ಪ್ರಾಂಶುಪಾಲರು ಮತ್ತು ಶಿಕ್ಷಕ ವೃಂದ ಬಿ.ಎಡ್‌. ಕಾಲೇಜು ಮತ್ತು ನರೇಂದ್ರ ಪಿ.ಯು.ಕಾಲೇಜು ಮತ್ತು ಪೋಷಕ ವೃಂದ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್‌ಕುಮಾರ್‌ ರೈ ಸ್ವಾಗತಿಸಿದರು. ದೈಹಿಕ ಶಿಕ್ಷಕಿ ವಾಣಿಶ್ರೀ ವಂದಿಸಿ, ದೈಹಿಕ ಶಿಕ್ಷಕ ಗಿರೀಶ್‌ ಕಣಿಯಾರು ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಮಕ್ಕಳಿಂದ ಪಥಸಂಚಲನ ಮತ್ತು ದೈಹಿಕ ವ್ಯಾಯಾಮ ನಡೆಯಿತು. ಕಾರ್ಯಕ್ರಮದ ಬಳಿಕ ಮುಖ್ಯ ಅತಿಥಿಗಳೊಂದಿಗೆ 8ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸೈನ್ಯದ ಅನುಭವ ಮತ್ತು ಅಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.