QR Code Business Card

ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ

ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನೋಲಜಿ ಇವರು ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

DSCF3355

9ನೇ ತರಗತಿಯ ವಿಷ್ಣುಪ್ರಸಾದ್, ಪ್ರಥಮ ಬಂಗೇರ, ನಿಶ್ಚಿತ್ ಇವರ ತಂಡ ಮತ್ತು ರಾಕೇಶ್‌ಕೃಷ್ಣ(ವೈಯಕ್ತಿಕ) ಭಾಗವಹಿಸಿದ ನಿಧಿಶೋಧನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ನಗದು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. 9ನೇ ತರಗತಿಯ ಕೌಶಲ್ ಸುಬ್ರಹ್ಮಣ್ಯ(ವೈಯಕ್ತಿಕ) ಛಾಯಾಗ್ರಹಣ ವಿಭಾಗದಲ್ಲಿ ಪ್ರಥಮ ಬಹುಮಾನ ಮತ್ತು ನಗದು ಬಹುಮಾನಗಳನ್ನು ಪಡೆದಿರುತ್ತಾರೆ. 9ನೇ ತರಗತಿಯ ಭೂಮಿಜ, ನವ್ಯಶ್ರೀ ಸನ್ನಿಧಿ ಕಜೆ-ನಿಧಿ ಶೋಧನೆ-ತೃತೀಯ, ಅಂಕಿತ್ ರೈ, ಮಯೂರ್.ಬಿ.ಜೆ, ಕೌಶಲ್.ಎಸ್.ವೈ, ಧ್ಯಾನ್.ಎಸ್.ರಾವ್-ಕೌಂಟರ್ ಸ್ಟೈಕ್-ತೃತೀಯ, ಶ್ರೀಶ ರೈ, ಕಾರ್ತಿಕ್ ಕೋಟ್ಯಾನ್, ಸುದೀಶ್, ಆದಿತ್ಯ.ವಿ.ವಿ-ನಿಧಿಶೋಧನೆ-ದ್ವಿತೀಯ, ಸಚಿತ್ ಶೆಟ್ಟಿ, ವಿಶಾಕ್, ವಿಕ್ರಮ್-ನಿಧಿಶೋಧನೆ ದ್ವಿತೀಯ, 8ನೇ ತರಗತಿಯ ರಾಕೇಶ್‌ಕೃಷ್ಣ, ಅದ್ವೈತ್ ಶೆಟ್ಟಿ, ಅಧಿಶ್ ಕಾಮತ್-ನಿಧಿಶೋಧನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ನಗದು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.