QR Code Business Card

ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮ

ಸ್ವದೇಶ ಹಾಗೂ ಸ್ವರಾಜ್ಯದ ಕಲ್ಪನೆಗೆ ಮೂಲಪುರುಷ ಶಿವಾಜಿ. ಶಿವಾಜಿಯ ಜೀವನ, ಸ್ವಾಭಿಮಾನಗಳು ನಮಗೆ ಆದರ್ಶವಾಗಬೇಕು ಎಂದು ಭಾರತೀಯ ಜನತಾ ಪಕ್ಷದ ವಿಭಾಗ ಪ್ರಮುಖ್ ಶ್ರೀ ಯತೀಶ್ ಆರ್ವಾರ್ ಹೇಳಿದರು. ಅವರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂನ್ 25 ರಂದು ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಶಿವಾಜಿ ಮಹಾರಾಜರ ಮಾತೃಶ್ರೀ ಜೀಜಾಬಾಯಿ ಪುರಾಣದ ಉದಾಹರಣೆಗಳ ಮೂಲಕ ಮಗನಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಿದ್ದರು. ಪ್ರತಿಯೊಬ್ಬ ತಾಯಿ ಕೂಡ ತನ್ನ ಮಕ್ಕಳಲ್ಲಿ ಶಿವಾಜಿಯನ್ನು ಕಾಣುತ್ತಾ ಬೆಳೆಸಿದರೆ ಹಿಂದೂ ಸಾಮ್ರಾಜ್ಯೋತ್ಸವ ಆಚರಣೆ ಅರ್ಥಪೂರ್ಣವೆನಿಸುತ್ತದೆ ಎಂದು ಅವರು ಹೇಳಿದರು. ಸಹಶಿಕ್ಷಕ ವೆಂಕಟೇಶ್ ಪ್ರಸಾದ್ ವೈಯಕ್ತಿಕ ಗೀತೆ ಹಾಡಿದರು. ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ಮುರಳೀಧರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ವಂದಿಸಿದರು.