QR Code Business Card

ವಿದ್ಯಾಭಾರತಿ ಚೆಸ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

ವಿದ್ಯಾಭಾರತಿ ಕರ್ನಾಟಕ ಪ್ರಾಂತ ಮಟ್ಟದ ಚೆಸ್ ಪಂದ್ಯಾಟವು ಶಿವಮೊಗ್ಗ ಜಿಲ್ಲೆಯ ಸೇವಾ ಭಾರತಿ ವಿದ್ಯಾ ಕೇಂದ್ರ ತೀರ್ಥಹಳ್ಳಿಯಲ್ಲಿ ದಿನಾಂಕ 2-8-2018 ರಂದು ನಡೆಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಾಲವರ್ಗ ವಿದ್ಯಾರ್ಥಿಗಳಾದ ಪಂಕಜ್.ಭಟ್ (7ನೇ), ಶಿವಚೇತನ್ (7ನೇ), ಪ್ರಣೀಲ್ ರೈ(6ನೇ), ಮನ್ವಿತ್.ಕೆ(7ನೇ), ಧನುಷ್ ರಾಮ(6ನೇ) ಪ್ರಥಮ ಸ್ಥಾನ ಪಡೆದಿರುತ್ತಾರೆ ಹಾಗೂ ತೆಲಂಗಾಣದಲ್ಲಿ ನಡೆಯುವ ಮಧ್ಯಕ್ಷೇತ್ರಿಯ ಮಟ್ಟದಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.