QR Code Business Card

ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ, ರಾಜ್ಯಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಕರ್ನಾಟಕ ಮತ್ತು ಅಮೃತ ಭಾರತಿ ವಿದ್ಯಾಸಂಸ್ಥೆಗಳು ಹೆಬ್ರಿ, ಉಡುಪಿ ಇವರ ಜಂಟಿ ಆಶ್ರಯದಲ್ಲಿ ಆಗಸ್ಟ್ 3 ರಂದು ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕಿಶೋರವರ್ಗದ ಬಾಲಕರ ತಂಡ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ತಂಡದಲ್ಲಿ ಹೃತಿಕ್.ಎಂ, ಅಭಿರಾಮ್, ಮುರಳಿ, ನಿತೇಶ್, ಪ್ರಣವ್.ಎಸ್, ಚರಣ್.ಬಿ.ಜೆ, ಅದಿತ್, ರಾಜನೀಶ್, ಪ್ರಥಮ್ ಬಂಗೇರ್, ಸುಶಾನ್, ಚರಣ್ ಭಾಗವಹಿಸಿರುತ್ತಾರೆ. ಹೃತಿಕ್.ಎಂ ಕ್ರೀಡಾಕೂಟದಲ್ಲಿ ಉತ್ತಮ ಎತ್ತುಗಾರಿಕೆ ಪ್ರಶಸ್ತಿಯನ್ನು ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.