QR Code Business Card

ಆಶ್ರಯ ಪಿ. ಗೆ ರಾಷ್ಟ್ರಮಟ್ಟದ ಕರಾಟೆಯಲ್ಲಿ ಪ್ರಶಸ್ತಿ

ಚೆನೈನ ಕಿಲ್ಪಕ್ ಜೆ. ಜೆ. ಸ್ಟೇಡಿಯಂನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿನಿ ಆಶ್ರಯ ಪಿ.  2 ಪ್ರಶಸ್ತಿ ಗಳಿಸಿದ್ದಾರೆ. 12 ರಿಂದ 14 ವಯೋಮಿತಿಯಲ್ಲಿ ಗ್ರೀನ್ ಟು ಬ್ರೌನ್ ಬೆಲ್ಟ್ ವಿಭಾಗದಲ್ಲಿ ವೈಯಕ್ತಿಕ ಕಟಾದಲ್ಲಿ ಪ್ರಥಮ ಹಾಗೂ ವೈಯಕ್ತಿಕ ಕುಮಿಟೆ ವಿಭಾಗದಲ್ಲಿ ದ್ವಿತೀಯ ಬಹುಮಾನ ಗಳಿಸಿದ್ದಾರೆ. ಈಕೆ ಚೇತನಾ ಸ್ಟುಡಿಯೋ ಮಾಲಕರಾದ ಅಶೋಕ್ ಕುಂಬ್ಳೆ ಹಾಗೂ ಶೋಭಾ ಬಿ. ದಂಪತಿ ಪುತ್ರ.