QR Code Business Card

ವಿದ್ಯಾಭಾರತಿ ಕರಾಟೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ದಿನಾಂಕ 29-08-2018 ರಂದು ಜ್ಞಾನದೀಪ ಆಂಗ್ಲಮಾಧ್ಯಮ ಶಾಲೆ, ಸುಳ್ಯ ಇಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಭುವನ್(10ನೇ), ಮಹಿಮಾ ಭಟ್(9ನೇ), ತೃಪ್ತಿ(7ನೇ), ಶ್ರವಣ(೮ನೇ), ಪ್ರಾಪ್ತಿ(7ನೇ) ಇವರು ಪ್ರಥಮ ಸ್ಥಾನ ಪಡೆದಿರುತ್ತಾರೆ. ಭೂಮಿಕಾ(9ನೇ), ಅಂಕಿತ್(10ನೇ), ಕಶ್ಯಪ್(8ನೇ), ಸ್ವಸ್ತಿಕ್(6ನೇ), ಪ್ರತೀಕ್ಷಾ(8ನೇ), ವಿತೇಶ್(10ನೇ) ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರಲ್ಲಿ ಪ್ರಥಮ ಸ್ಥಾನ ಪಡೆದ 5 ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.