QR Code Business Card

ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ, ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಹಾಗೂ ಸರಕಾರಿ ಪ್ರೌಢಶಾಲೆ, ಪಾಪೆಮಜಲು ಇದರಲ್ಲಿ ಆಶ್ರಯದಲ್ಲಿ ದಿನಾಂಕ 30-8-2018 ರಂದು ನಡೆದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಾಲಕರ ತಂಡ ಭಾಗವಹಿಸಿ ಚಾಂಪಿಯನ್ ಆಗಿ ಮೂಡಿ ಬಂದಿದ್ದು, ಗುತ್ತಿಗಾರನಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ತಂಡದಲ್ಲಿ ಹೃತಿಕ್.ಎಂ, ಪ್ರಣಾಮ್.ಎಸ್, ಅಭಿರಾಮ್.ಯು, ಚರಣ್.ಡಿ, ಅದಿತ್, ರಜನೀಶ್, ಕಾರ್ತಿಕ್ ಕೊಟ್ಯಾನ್, ನಿತೀಶ್, ಮುರಳಿ, ಪ್ರಥಮ್ ಬಂಗೇರ್, ಸುಶಾಂತ್, ಜತೀನ್ ಕರ್ಕೇರ ಭಾಗವಹಿಸಿರುತ್ತಾರೆ ಹಾಗೂ ಬೆಸ್ಟ್ ಹೊಡೆತಗಾರನಾಗಿ ಮುರಳಿ ಹಾಗೂ ಉತ್ತಮ ಎತ್ತುಗಾರಿಕೆಯಾಗಿ ಹೃತಿಕ್.ಎಂ ವೈಯಕ್ತಿಕ ಬಹುಮಾನವನ್ನು ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.