QR Code Business Card

ಪುಟ್‌ಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಪುತ್ತೂರು ಇದರ ಆಶ್ರಯದಲ್ಲಿ ಸೆಪ್ಟೆಂಬರ್ 2 ರಂದು ನಡೆದ ತಾಲೂಕು ಮಟ್ಟದ ಪುಟ್‌ಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಾಲಕರ ತಂಡ ಭಾಗವಹಿಸಿ, ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಇವರು ಮುಂದೆ ಸಪ್ಟೆಂಬರ್‌  6 ರಂದು ಸಚಿತ ಜೋಸೆಫ್ ಶಾಲೆ, ಬಜ್ಪೆಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ. ತಂಡದಲ್ಲಿ ಪಿಲ್‌ದಖರ್, ಮಿಕಿದಖರ್, ಪಿರ್‌ಕಟ್, ಪ್ರಾನ್ ಶಿಲ್ಲಾ, ರಾಮ್, ಸ್ವಾಕಿಪಾವ, ಕೆರ್ಮಿ, ವಾನ್‌ರಬಕ್, ಕೃತಿಕ್, ಬಾನ್‌ಟೆಲಾಂಗ್, ಕೊಮಿಂಗ್ ಸ್ಟೋನ್, ಎಡ್‌ಮಂಡ್, ಹೈಫರ್‌ಮಿ, ಲಕಮ್, ವಿವೇಕ್ ಕೃಷ್ಣನ್, ರಾಹುಲ್ ಸಿಂಗ್ ಭಾಗವಹಿಸಿರುತ್ತಾರೆ.