QR Code Business Card

ಸೃಷ್ಟಿ ಚಿತ್ರಕಲಾ ಸಂಘದ ಉದ್ಘಾಟನೆ

ದಿನಾಂಕ 12-9-2018 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೃಷ್ಟಿ ಚಿತ್ರಕಲಾ ಸಂಘದ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಚಂದ್ರಶೇಖರ ಇವರು ನೆರವೇರಿಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಂತರ ವಿವಿಧ ಬಣ್ಣಗಳ ಮೂಲಕ ಹಸ್ತಪ್ರಮಾಣ ವಚನವನ್ನು ಮಾಡಿದರು. ವಿದ್ಯಾರ್ಥಿನಿ ಕು.ದ್ವಿತಿ ಸ್ವಾಗತಿಸಿ, ವಿದ್ಯಾರ್ಥಿಗಳಾದ ಸಿಂಧೂರ, ಮನ್ವಿತಾ, ರಮ್ಯ ಪ್ರಾರ್ಥಿಸಿ, ವಿದ್ಯಾರ್ಥಿ ಸ್ವಾತಿಕ್ ವಂದಿಸಿ, ವಿದ್ಯಾರ್ಥಿನಿ ಕು.ಕನ್ಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.