QR Code Business Card

ಅಖಿಲ ಭಾರತೀಯ ಜ್ಞಾನ-ವಿಜ್ಞಾನ ಮೇಳ : ದಕ್ಷಿಣ ಮಧ್ಯಕ್ಷೇತ್ರ ಮಟ್ಟಕ್ಕೆ ಆಯ್ಕೆ

ಗುಲ್ಬರ್ಗಾ(ಕಲಬುರ್ಗಿ) ಜಿಲ್ಲೆಯ ಸೇಡಂನಲ್ಲಿ ಸೆಪ್ಟಂಬರ್ 7, 8, 9 ರಂದು ನಡೆದ ರಾಜ್ಯಮಟ್ಟದ ಜ್ಞಾನ-ವಿಜ್ಞಾನ ಮೇಳದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಕಿಶೋರವರ್ಗದ ವಿಭಾಗದಲ್ಲಿ ಕನ್ಯಾ ಶೆಟ್ಟಿ (9ನೇ) ಸಂಸ್ಕೃತಿ ಜ್ಞಾನ ಪತ್ರವಾಚನದಲ್ಲಿ ಪ್ರಥಮ ಸ್ಥಾನ, ರಾಕೇಶ್‌ ಕೃಷ್ಣ (9ನೇ ತರಗತಿ)-ವಿಜ್ಞಾನ ಸಂಶೋಧನಾತ್ಮಕ ಮಾದರಿಯಲ್ಲಿ ಪ್ರಥಮ ಸ್ಥಾನ, ಬಾಲವರ್ಗದಲ್ಲಿ ವರ್ಷ ಕೆ. (8ನೇ ತರಗತಿ)-ಸಂಸ್ಕೃತಿ ಜ್ಞಾನ ಪತ್ರವಾಚನದಲ್ಲಿ ಪ್ರಥಮ ಸ್ಥಾನ, ಆಶ್ರಯ (8ನೇ ತರಗತಿ)-ವೇದಗಣಿತ ಪತ್ರವಾಚನದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ವಿಶಾಖಪಟ್ಟಣಂನಲ್ಲಿ ಇದೇ ತಿಂಗಳ ಸೆಪ್ಟೆಂಬರ್ 30, ಅಕ್ಟೋಬರ್ 1 ಮತ್ತು 2 ರಂದು ನಡೆಯಲಿರುವ ದಕ್ಷಿಣ-ಮಧ್ಯ ಕ್ಷೇತ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.