QR Code Business Card

ಅಥ್ಲೆಟಿಕ್ಸ್ ಕ್ರೀಡಾಕೂಟ : ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ, ಪುತ್ತೂರು ಇದರ ಆಶ್ರಯದಲ್ಲಿ ಅಕ್ಟೋಬರ್ 3 ಮತ್ತು 4 ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಪ್ರಾಥಮಿಕ ವಿಭಾಗದ ಬಾಲಕರ ಮತ್ತು ಬಾಲಕಿಯರು ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಪ್ರಾಥಮಿಕ ವಿಭಾಗದ ಬಾಲಕರಲ್ಲಿ ರಿಯೋ ಬರ್ಫಿ ಲಮರೆ ಚಕ್ರ ಎಸೆತ ಪ್ರ, ಉದ್ದಜಿಗಿತ ಪ್ರ, ಎತ್ತರ ಜಿಗಿತ ಪ್ರ, 4×100 ಮೀ ರಿಲೇ ಪ್ರ, ಶ್ರೀನಿಧಿ ಶಂಕರ್ 1೦೦ ಮೀ. ಪ್ರ, 2೦೦ ಮೀ. ಪ್ರ, 4×100 ಮೀ. ರಿಲೇ ಪ್ರ, ಸುಶಾನ್ ಪ್ರಕಾಶ್ 200 ಮೀ. ದ್ವಿ, 4×100 ಮೀ. ರಿಲೇ ಪ್ರ, ಅಮಿತ್ ಬೋರ್ಕರ್ 4×100 ಮೀ. ರಿಲೇ ಪ್ರ, ಸ್ಥಾನ.

ಬಾಲಕಿಯರ ವಿಭಾಗದಲ್ಲಿ ಅನಘ ಕೆ.ಎ ಉದ್ದಜಿಗಿತ ದ್ವಿ, 4೦೦ ಮೀ. ದ್ವಿ, 80 ಮೀ. ಹರ್ಡಲ್ಸ್ ಪ್ರ, 4×100 ಮೀ. ರಿಲೇ ಪ್ರ, ಅನಘ ಕೆ.ಎನ್ 100 ಮೀ. ಪ್ರ, 200 ಮೀ. ಪ್ರ, 4×100 ಮೀ. ರಿಲೇ ಪ್ರ, ವಂಶಿ 80 ಮೀ. ಹರ್ಡಲ್ಸ್ ದ್ವಿ, ಮಾನ್ಯ ಎತ್ತರ ಜಿಗಿತ ಪ್ರ, ಲಿಖಿತ ರೈ 4×100 ಮೀ. ರಿಲೇ ಪ್ರ, ಸ್ಥಾನ.

8ನೇ ತರಗತಿ ಪ್ರೌ. ವಿಭಾಗದ ಬಾಲಕರಲ್ಲಿ ಫಿರ್ ಕಟ್ ಸಪ್ರಾಂಗ್ 600 ಮೀ. ಪ್ರ, ಉದ್ದಜಿಗಿತ ಪ್ರ, 200 ಮೀ. ದ್ವಿ, ಬಾಲಕಿಯರ ವಿಭಾಗದಲ್ಲಿ ಶ್ರಾವ್ಯ 600 ಮೀ. ಪ್ರ, 400 ಮೀ., ಶಿವಾನಿ 80 ಮೀ. ಹರ್ಡಲ್ಸ್ ಪ್ರ, ಪೂಜಾ ಶ್ರೀ 100 ಮೀ., ತೃ ಸ್ಥಾನ.

ಪ್ರೌಢಶಾಲೆ ವಿಭಾಗದ ಬಾಲಕರಲ್ಲಿ ಚಂದನ್ ಕುಮಾರ್ ಕೆ ಪಿ 100 ಮೀ. ದ್ವಿ, 200 ಮೀ. ತೃ, 4×100 ಮೀ. ರಿಲೇ ದ್ವಿ, ಸುಶಾನ್ ಬಪ್ಪಳಿಗೆ 400 ಮೀ. ದ್ವಿ 800 ಮೀ. ದ್ವಿ, 4×100 ಮೀ. ರಿಲೇ ದ್ವಿ,, ಚಿರಾಯು ಎಮ್ ರೈ ಗುಂಡು ಎಸೆತ ಪ್ರ, ಚಿರಾಗ್ ಎಮ್ ರೈ ಚಕ್ರ ಎಸೆತ ದ್ವಿ, ಫಿರ್ ಕಟ್ ಪಸ್ಸೆವ್ 4×100 ಮೀ. ರಿಲೇ ದ್ವಿ, , ಬಂಟೈಲಾಂಗ್ 4×100 ಮೀ. ರಿಲೇ ದ್ವಿ,

ಬಾಲಕಿಯರ ವಿಭಾಗದಲ್ಲಿ ಪ್ರಣಮ್ಯ ಶೆಟ್ಟಿ ಜಾವೆಲಿನ್ ಎಸೆತ ಪ್ರ, ಗುಂಡು ಎಸೆತ ದ್ವಿ, ಚಕ್ರ ಎಸೆತ ದ್ವಿ, ರಿಯಾ ಹ್ಯಾಮರ್ ಎಸೆತ ಪ್ರ, ಚರಿತಾ ಬಿ.ಆರ್ ೮೦ಮೀ ಹರ್ಡಲ್ಸ್ ದ್ವಿ, ಖುಷಿ ರೈ 100 ಮೀ. ತೃ 200 ಮೀ. ತೃ, ಅಂಕಿತ ಬೋರ್ಕರ್ ಕೋಲು ನೆಗೆತ ಸ್ಥಾನ ಪಡೆದಿದ್ದಾರೆ.

ಪ್ರಾಥಮಿಕ ವಿಭಾಗದ ಬಾಲಕರಲ್ಲಿ ರಿಯೋ ಬರ್ಫಿ ಲಮರೆ 15 ಅಂಕ, ಬಾಲಕಿಯರ ವಿಭಾಗದಲ್ಲಿ ಅನಘ ಕೆ.ಎ 11 ಅಂಕ, 8ನೇ ತರಗತಿ ಪ್ರೌ. ವಿಭಾಗದ ಬಾಲಕರಲ್ಲಿ ಫಿರ್ ಕಟ್ ಸಪ್ರಾಂಗ್ 13 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಪಡೆದುಕೊಂಡಿದ್ದು, ಇಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಅಕ್ಟೋಬರ್ 12 ಮತ್ತು 13 ರಂದು ಉಜಿರೆಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.