QR Code Business Card

ಅಭಿನಂದನೆಗಳು

2017-18 ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 95 ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ಸ್ಕೌಟ್- ಗೈಡ್ ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ ಮತ್ತು ಗೈಡ್ ಕರ್ನಾಟಕ ರಾಜ್ಯ ಸಂಸ್ಥೆಯು ಆಯೋಜಿಸಿರುವ ಅಭಿನಂದನಾ ಕಾರ್ಯಕ್ರಮವು ದಿ. 9-10-2018 ರಂದು ’ಜ್ಞಾನಜ್ಯೋತಿ ಸಭಾಂಗಣ’ ಬೆಂಗಳೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಸ್ಕೌಟ್‌ಗಳಾದ ಅಕ್ಷಯ ಸುಬ್ರಮಣ್ಯ.ಇ (ಶ್ರೀಮತಿ ಮತ್ತು ಶ್ರೀ ಶಿವಪ್ರಸಾದ್.ಇ ಮತ್ತು ಗೀತಾರವರ ಪುತ್ರ). ರಾಹುಲ್ ನಾಯಕ್ (ಶ್ರೀಮತಿ ಮತ್ತು ಶ್ರೀ ರವೀಂದ್ರ ನಾಯಕ್ ಮತ್ತು ಉಷಾ ರವೀಂದ್ರ ನಾಯಕ್ ಇವರ ಪುತ್ರ) ಜೈದೀಪ್ ಕೆ.ಎನ್. (ಶ್ರೀಮತಿ ಮತ್ತು ಶ್ರೀ ನವೀನ್ ಕುಮಾರ್ ಮತ್ತು ಕವಿತಾರವರ ಪುತ್ರ) ಭಾಗವಹಿಸಲಿದ್ದಾರೆ. ಇವರು ಸ್ಕೌಟಿಂಗ್‌ನ ಅತ್ಯುತ್ತಮ ಪದಕ ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಗೆ ಹಾಜರಾಗಿರುವರು. ಇವರಿಗೆ ಸಂಸ್ಥೆಯ ಪರವಾಗಿ ಮತ್ತು ಆಡಳಿತ ಮಂಡಳಿಯ ವತಿಯಿಂದ ಅಭಿನಂದನೆಗಳು.