QR Code Business Card

ಚೆಸ್ ತಂಡ ಎಸ್. ಜಿ. ಎಫ್.­ಗೆ ಆಯ್ಕೆ

ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾಸಂಸ್ಥಾನ್ ಹಾಗೂ ಶ್ರೀ ಮದ್ಭಗವತ್ ಗೀತಾ ರಾಷ್ಟೀಯ ಮಾಧ್ಯಮಿಕ ವಿದ್ಯಾಲಯ ಕುರುಕ್ಷೇತ್ರ ಇಲ್ಲಿ ಸೆಪ್ಟಂಬರ್ 25 ರಿಂದ 29 ರ ವರೆಗೆ ನಡೆದ ರಾಷ್ಟ ಮಟ್ಟದ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಡಿಸೆಂಬರ್ 11 ರಿಂದ 13 ರ ವರೆಗೆ ದಾದ್ರ ನಗರ್ ಹಾವೇಲಿಯಲ್ಲಿ ನಡೆಯುವ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಇದರ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ತಂಡದಲ್ಲಿ ಪಂಕಜ್ ಭಟ್(7ನೇ ತರಗತಿ), ಮನ್ವಿತ್ ಕಣಜಾಲು(7ನೇ ತರಗತಿ), ಪ್ರಣೀಲ್ ರೈ(6ನೇ ತರಗತಿ), ಶಿವಚೇತನ್ ಹಳೆಮನೆ (7ನೇ ತರಗತಿ), ಧನುಷ್ ರಾಮ್ ಏಮ್(6ನೇ ತರಗತಿ) ಭಾಗವಹಿಸಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.