QR Code Business Card

ಶಾಲಾ ವಾಹನ ಪೂಜಾ ಉತ್ಸವ

ದಿನಾಂಕ 10-10-2018 ನೇ ಬುಧವಾರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಪ್ರಥಮ ಬಾರಿಗೆ ಶಾಲಾ ವಾಹನ ಪೂಜಾ ಉತ್ಸವವನ್ನು ಹಮ್ಮಿಕೊಳ್ಳಲಾಯಿತು. ಹಿಂದಿನ ಕಾಲದಲ್ಲಿ ಯುದ್ಧದ ಸಂದರ್ಭದಲ್ಲಿ ರಾಜ ಮನೆತನದವರು ತಮ್ಮ ರಕ್ಷಣೆಗೆ ಸಹಕಾರಿಯಾಗುವ ಆಯುಧಗಳನ್ನು ಅತ್ಯಂತ ಭಕ್ತಿಯಿಂದ ಪೂಜಿಸುತ್ತಿದ್ದರು. ಕಾಲ ಬದಲಾದಂತೆ ಪ್ರಸ್ತುತ ದಿನಗಳಲ್ಲಿ ಮಾನವನ ಅನುಕೂಲತೆಗಾಗಿ ಬಳಕೆಯಾಗುವ ವಾಹನಗಳನ್ನು ಪೂಜಿಸುವುದರ ಮೂಲಕ ಆರಾಧಿಸಲಾಗುತ್ತದೆ.

ಈ ನಿಟ್ಟಿನಲ್ಲಿ ಶಾಲಾ ಮಕ್ಕಳು ತಾವು ಬರುವ ಶಾಲಾ ವಾಹನವನ್ನು ತಳಿರುತೋರಣದಿಂದ ಶೃಂಗರಿಸಿ, ಶಾಲಾ ಮಕ್ಕಳು ಚೆಂಡೆ ವಾದನ ಮತ್ತು ಮಂಗಳ ವಾದ್ಯದೊಂದಿಗೆ, ಶ್ರೀ ಕಾರ್ತಿಕ್ ಭಟ್ ಅವರ ಪೌರೋಹಿತ್ಯದಲ್ಲಿ ಸುಮಾರು 20 ಶಾಲಾ ವಾಹನ ಮತ್ತು ಶಿಕ್ಷಕ ವೃಂದದವರ ವಾಹನಗಳಿಗೆ ಪೂಜೆಯನ್ನು ನೆರವೇರಿಸಿದರು. ಪೋಷಕರು ಮತ್ತು ಮಕ್ಕಳು ಹಾಗೂ ಶಾಲೆಯ ವತಿಯಿಂದ ಶಾಲಾ ವಾಹನ ಚಾಲಕರಿಗೆ ವಿಶೇಷ ಸನ್ಮಾನ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಲಾಆಡಳಿತ ಮಂಡಳಿ ಸದಸ್ಯರು, ಶಿಕ್ಷಕ ರಕ್ಷಕ ಸಂಘದ ಸರ್ವಸದಸ್ಯರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.