QR Code Business Card

ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ :  ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಅಥ್ಲ್‌ಟಿಕ್ಸ್ ಎಸೋಸಿಯೇಶನ್ ಇದರ ಆಶ್ರಯದಲ್ಲಿ ಶ್ರೀ ಮಹಾತ್ಮ ಗಾಂಧಿ ಕ್ರೀಡಾಂಗಣ, ತುಮಕೂರು ಇಲ್ಲಿ ನವೆಂಬರ್ 3 ರಂದು ನಡೆದ ರಾಜ್ಯ ಮಟ್ಟದ ಅಥ್ಲ್‌ಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಶ್ರೀನಿಧಿ ಶಂಕರ್ (ಶ್ರೀಮತಿ ಮತ್ತು ಶ್ರೀ ರವಿಶಂಕರ ಮತ್ತು ಅನುಪಮ, ಕೇಪುಲು ಇವರ ಪುತ್ರ) ಮತ್ತು ಸುಶಾನ್ ಪ್ರಕಾಶ್ (ಶ್ರೀ ರವಿಪ್ರಕಾಶ್ ಮತ್ತು ಶ್ರೀಮತಿ ಚಂದ್ರಕಲಾ, ದೈಹಿಕ ಶಿಕ್ಷಕಿ, ಬೆಟ್ಟಂಪಾಡಿ ಇವರ ಪುತ್ರ) -4×100 ಮೀ ರಿಲೇ ಪ್ರಥಮ ಸ್ಥಾನ ಹಾಗೂ ಬಾಲಕಿಯರ ವಿಭಾಗದಲ್ಲಿ ಅನಘ ಕೆ.ಎ.(ಶ್ರೀ ಅನಿಲ್ ಕುಮಾರ್ ಮತ್ತು ಶ್ರೀಮತಿ ಕವಿತಾ.ಕೆ, ತೆಂಕಿಲ ಇವರ ಪುತ್ರಿ) ಮತ್ತು ಅನಘ ಕೆ.ಎನ್.(ಕ್ಯಾಂಪ್ಕೊ ಉದ್ಯೋಗಿ ಶ್ರೀ ನವೀನ್ ಕುಮಾರ್ ಮತ್ತು ಶ್ರೀಮತಿ ಕವಿತಾ.ಡಿ.ಎಂ, ಮರೀಲ್ ಇವರ ಪುತ್ರಿ) -4×100 ಮೀ ರಿಲೇ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.