QR Code Business Card

INSEF – ರಾಷ್ಟ್ರೀಯ ಮಟ್ಟದ ವಿಜ್ಞಾನ ಮೇಳಕ್ಕೆ ಆಯ್ಕೆ

INSEF ವಿಜ್ಞಾನ ಮೇಳವು ನಡೆಸುವ Regional Science Fair ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯವಿದ್ಯಾರ್ಥಿಗಳು ಭಾಗವಹಿಸಿದ್ದು, ಇದರಲ್ಲಿ 9ನೇ ತರಗತಿಯ ಶರುಣ್ ಶಶಿಧರ್ ಇವರ Plastink from waste plastics ಪ್ರಾಜೆಕ್ಟ್ ಜನವರಿ ತಿಂಗಳು ಗುಜರಾತಿನ ರಾಜ್ಕೋಟ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ವಿಜ್ಞಾನ ಮೇಳಕ್ಕೆಆಯ್ಕೆಯಾಗಿದೆ. 8ನೇ ತರಗತಿಯ ಆದ್ಯ ಸುಲೋಚನ ಮುಳಿಯ ಇವರ The integrated Railway Intact System ಬೆಳ್ಳಿ ಪದಕವನ್ನು , 9ನೇ ತರಗತಿಯ ರಾಕೇಶ್‌ಕೃಷ್ಣ ಇವರ A Novel herbal mosquito repellent cream incense stick and vapourising liquid from the wild plant hyptis sauveolens ಬೆಳ್ಳಿ ಪದಕವನ್ನು, 9ನೇ ತರಗತಿಯ ವಿಜಿತ್ ಮತ್ತು ಹರ್ಷಿತ್ ಶೆಟ್ಟಿ ಇವರು  candle from Jackfruit sap ಕಂಚಿನ ಪದಕವನ್ನು, 9ನೇ ತರಗತಿಯ ಸ್ವೀಕೃತ ಇವರ Presence of estimation of radio Nucleids in some medicinal plants ಕಂಚಿನ ಪದಕವನ್ನು, 9ನೇ ತರಗತಿಯ ಯುವರಾಜ್ ಇವರ Ravishing light an innovative conception of displaying images ಪ್ರೋತ್ಸಾಹಕ ಬಹುಮಾನವನ್ನು ಪಡೆದಿರುತ್ತಾರೆ. ಇವರಿಗೆ ವಿಜ್ಞಾನ ವಿಭಾಗದ ಶಿಕ್ಷಕಿ ಶಾರದ ಶೆಟ್ಟಿ ಮತ್ತು ಕಂಪ್ಯೂಟರ್ ವಿಭಾಗದ ಶಿಕ್ಷಕ ರಾಜಶೇಖರ್.ಬಿ.ಸಿ ಇವರು ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.