QR Code Business Card

ಅನ್ವೇಷಣಾ ವಿವಿಧ ವಿಜ್ಞಾನ ಸ್ಪರ್ಧೆಗಳಲ್ಲಿ ಹಲವು ಬಹುಮಾನ

ಅಂಬಿಕಾ ಪದವಿ ಪೂರ್ವ ವಿದ್ಯಾಲಯ (ಬಪ್ಪಳಿಗೆ) ಇವರು ಆಯೋಜಿಸಿದ ಅನ್ವೇಷಣಾ ವಿವಿಧ ವಿಜ್ಞಾನ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ. ವರ್ಷಾ ಕೆ. (8ನೇ) (5000 ರೂಪಾಯಿ ನಗದು) ವಿಜ್ಞಾನ ಪ್ರಬಂಧ ಮಂಡನೆ ಪ್ರಥಮ, ಅಚಿಂತ್ಯ ಕೃಷ್ಣ (10ನೇ) ಮತ್ತು ಶ್ರೇಯಸ್ ಹೆರಳೆ (10ನೇ) ವಿಜ್ಞಾನ ರಸಪ್ರಶ್ನೆ ದ್ವಿತೀಯ (3000 ರೂ. ನಗದು) ಧ್ಯಾನ್ ಯಸ್ ರಾವ್ (10ನೇ), ಶಶಾಂಕ್ ಬಿ. (10ನೇ) ಮತ್ತು ಅಂಕಿತ್ ರೈ (10ನೇ) ಇವರು ವಿಜ್ಞಾನ ಮಾದರಿ ದ್ವಿತೀಯ (ರೂ. 3000 ನಗದು) ಮತ್ತು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ತಿಳಿಸಿದ್ದಾರೆ.